ಜನತೆಗೆ ನೀಡಿದ ಭರವಸೆ ಈಡೇರಿಸುವಲ್ಲಿ ಆಪ್ ಸರ್ಕಾರ ವಿಫಲ : ತಿವಾರಿ

ನವದೆಹಲಿ

     ರಾಜ್ಯದ ನೀರು ಸರಬರಾಜು ಹೆಚ್ಚಿಸಲು ಚಂದ್ರವಾಲ್ ಸ್ಥಾವರಕ್ಕೆ ಅಡಿಪಾಯ ಹಾಕಿರುವುದು ಮತ್ತು ಅಪರಾಧ ತಡೆಗಟ್ಟಲು ಸಿಸಿಟಿವಿ ಅಳವಡಿಕೆ ಮುಂಬರು ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡ ಕೇಜ್ರಿವಾಲ್‌ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳು ಎಂದು ಬಿಜೆಪಿ ದೆಹಲಿ ದೆಹಲಿ ಅಧ್ಯಕ್ಷ ಮನೋಜ್ ತಿವಾರಿ ಸೋಮವಾರ ಆರೋಪಿಸಿದ್ದಾರೆ.

       ಈ ಕೆಲಸಗಳನ್ನು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇಜ್ರಿವಾಲ್ ಮಾಡಬೇಕಾಗಿತ್ತು. ದೆಹಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ಚುನಾವಣಾ ವರ್ಷದಲ್ಲಿ ಜನರ ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿವಾರಿ ಹೇಳಿದರು.

       ಕೇಜ್ರಿವಾಲ್ ಅವರಿಗೆ ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆಗಳಾದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು, ಹೊಸ ಬಸ್ಸುಗಳನ್ನು ಒದಗಿಸಲು ಮತ್ತು ನಗರದಲ್ಲಿ ಮಾರ್ಷಲ್‌ಗಳನ್ನು ನಿಯೋಜಿಸಲು ಇಲ್ಲಿವರೆಗೆ ಸಾಧ್ಯವಾಗಿರಲಿಲ್ಲ. ದೆಹಲಿಯ ಜನರಿಗೆ ರಾಜ್ಯ ಸರ್ಕಾರ ಯಾವುದೇ ಕೆಲಸ ಮಾಡಿಲ್ಲ ಎಂಬುದು ಅರ್ಥವಾಗಿದ್ದು, ಲೋಕಸಭಾ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿಗಳನ್ನು ಬೆಂಬಲಿಸಲಿಲ್ಲ . ದೆಹಲಿಯ ತೆರಿಗೆದಾರರು ಪಾವತಿಸಿದ ಹಣವನ್ನು ಜನಪ್ರಿಯತೆಗಾಗಿ ಜಾಹೀರಾತುಗಳಿಗೆ ದುರುಪಯೋಗಪಡಿಸಿಕೊಳ್ಳುವ ಮೂಲಕ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ದೆಹಲಿಯ ಅಭಿವೃದ್ಧಿಗೆ ಯಾರು ಅಡ್ಡಿಯಾಗಿದ್ದಾರೆಂದು ಕೇಜ್ರಿವಾಲ್ ಸ್ವತಃ ಸಾಬೀತುಪಡಿಸಿದ್ದಾರೆ ಎಂದು ತಿವಾರಿ ಟೀಕಿಸಿದ್ದಾರೆ.ಬಿಜೆಪಿ ದೆಹಲಿಯಲ್ಲಿ ಜನರ ಹಿತಕ್ಕಾಗಿ ಸರ್ಕಾರದ ವಿರುದ್ಧ ಹೋರಾಡಿದೆ ಎಂದು ಅವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap