ವೈ ಎಸ್ ಆರ್ ಕಾಂಗ್ರೆಸ್ ಸೇರಿದ ಜಯಸುಧಾ..!!

0
27

ಹೈದರಾಬಾದ್:

       ತೆಲಗು ಚಿತ್ರರಂಗದಲ್ಲಿ ಖ್ಯಾತ ನಟಿ ಮತ್ತು ಟಿಡಿಪಿಯ ಮಾಜಿ ಶಾಸಕಿ ಕೂಡ ಆಗಿರುವ ಶ್ರೀಮತಿ ಜಯಸುಧಾ ತಮ್ಮ ಪುತ್ರ ನಿಹಾರ್ ಕಪೂರ್ ಜೊತೆ ನಿನ್ನೆ ವೈಎಸ್ ಆರ್ ಕಾಂಗ್ರೆಸ್ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದಾರೆ.

       ಹೈದಾರಾಬಾದ್ ನ ಲೋಟಸ್ ಪಾಂಡ್ ನಲ್ಲಿರುವ ಕಛೇರಿಯಲ್ಲಿ ಪಕ್ಷದ ಸಂಸ್ಥಾಪನಾ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ಜಯಸುಧಾ ಮತ್ತವರ ಪುತ್ರ ವೈಎಸ್ ಆರ್ ಕಾಂಗ್ರೆಸ್ ಸೇರಿದರು.

       ಜಗನ್ ಮೋಹನ್ ರೆಡ್ಡಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಆಗಬೇಕೆಂಬುದು ನನ್ನ ಬಯಕೆ, ಆ ನಿಟ್ಟಿನಲ್ಲಿ ಕೆಲಸ ಮಾಡಲು ನಾನು ಇಷ್ಟಪಟ್ಟು ವೈಎಸ್ ಆರ್ ಕಾಂಗ್ರೆಸ್ ಸೇರಿದ್ದೇನೆ ಎಂದು ಜಯಸುಧಾ ಹೇಳಿದ್ದಾರೆ. ವೈಎಸ್ ಆರ್ ಕಾಂಗ್ರೆಸ್ ಸೇರಿರುವುದು ನನಗೆ ಸಂತಸ ತಂದಿದೆ. ವಾಪಸ್ ನನ್ನ ಮನೆಗೆ ಬಂದಂತೆ ಅನಿಸುತ್ತಿದೆ ಎಂದು ಹೇಳಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here