ನವದೆಹಲಿ
ಐ ಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧನಕ್ಕೊಳಗಿ ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿರುವ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಇಂದು ತಮ್ಮ 74 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಅವರಿಗೆ ಕಾರ್ತಿ ಚಿದಬರಂ ಪತ್ರದ ಮೂಲಕ ಶುಭ ಕೋರಿದ್ದಾರೆ.
My letter to my father @PChidambaram_IN on his birthday #HBDPChidambaram pic.twitter.com/LCTV2Br4Ha
— Karti P Chidambaram (@KartiPC) September 16, 2019
ಚಿದಂಬರಂ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೆ.23 ರಂದು ವಿಚಾರಣೆ ನಡೆಸಲಿದ್ದು ಅವರಿಗೆ ರಿಲೀಫ್ ಸಿಗುವ ನಂಬಿಕೆ ನಮಗಿದೆ ಮತ್ತು ನಾವೆಲ್ಲರು ನಿಮ್ಮ ಜೊತೆಗಿದ್ದೇವೆ ಯಾವ 56 ಇಂಚಿನ ಎದೆಯೂ ನಿಮ್ಮನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ತಂದೆಗೆ ಧೈರ್ಯ ಹೇಳುವ ಪ್ರಯತ್ನ ಮಾಡಿದ್ದಾರೆ .
ನೀವು ಯಾವುದೇ ತಪ್ಪು ಮಾಡಿಲ್ಲಾ ಎಂದು ನ್ಯಾಯಲಯ ತೀರ್ಪು ನೀಡುತ್ತದೆ ಎಂದು ನಮಗೆ ನಂಬಿಕೆ ಇದೆ ಮತ್ತು ಇತ್ತೀಚೆಗೆ ರಾಜಕಾರಣಿಗಳು ಸಿನಿಮಾ ನಟರಂತೆ ಹುಟ್ಟು ಹಬ್ಬ ಆಚರಿಸಿಕೊಳ್ಳವುದು ಸಾಮಾನ್ಯವಾದರು ನೀವು ಅವರೆಲ್ಲರಿಗಿಂತ ಭಿನ್ನವಾಗಿ ನಿಂತಿರಿ ನಿಮ್ಮಂತಹ ಸರಳ ಸಜ್ಜನಿಕೆಯ ವ್ಯಕ್ತಿಗೆ ದೇವರು ಒಳ್ಳೆಯದನ್ನೇ ಮಾಡುತ್ತಾನೆ ಎಂದು ತಮ್ಮ ಪತ್ರದಲ್ಲಿ ಕಾರ್ತಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ