ಹೊಸದಿಲ್ಲಿ :
ಸ್ವಾತಂತ್ರ್ಯ ಹೋರಾಟದ ಶಾಂತ ಸೈನಿಕ ನಮ್ಮ ದೇಶದ ರಾಷ್ಟ್ರಪಿತ ಮೋಹನ್ ದಾಸ ಕರಮಚಂದ್ ಗಾಂಧೀಜಿಯವರ 71ನೇ ಪುಣ್ಯ ತಿಥಿಯ ದಿನವಾದ ಇಂದು ಇಡೀ ದೇಶ ಆ ಮಹಾನ್ ಚೇತನಕ್ಕೆ ಭಾವಪೂರ್ಣ ನಮನ ಸಲ್ಲಿಸಿದೆ.
ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀ ರಾಮ ನಾಥ್ ಕೋವಿಂದ್ ಮತ್ತು ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಪಿತನಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು ಎಂದು ತಿಳಿದು ಬಂದಿದೆ .
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರು ಕೂಡ ರಾಜಘಾಟ್‌ನಲ್ಲಿ ರಾಷ್ಟ್ರಪಿತನಿಗೆ ಪುಷ್ಟಾಂಜಲಿ ಅರ್ಪಿಸಿದರು.
ಮಹಾತ್ಮಾ ಗಾಂಧೀಜಿಯವರಿಗೆ ಅತ್ಯಂತ ಪ್ರಿಯವಾಗಿದ್ದ ರಘುಪತಿ ರಾಘವ ರಾಜಾರಾಂ ಭಜನೆಯನ್ನು ರಾಜಘಾಟ್ ನಲ್ಲಿ ನುಡಿಸಲಾಯಿತು.
ನನ್ನ ದೇಶ ಎಂದು ಯಾರ ಅಡಿಯಾಳಾಗಬಾರದು ನನ್ನ ಪ್ರಜೆಗಳು ಸ್ವತಂತ್ರರಾಗಬೇಕು ಎಂದು ದುಡಿದ ಮಹಾನ್ ಚೇತನಕ್ಕೆ ಇಡೀ ದೇಶ ಅವರ 71ನೇ ಪುಣ್ಯ ಸ್ಮರಣೆಯ ದಿನ ಮೌನವಾಗಿ ನುಡಿನಮನ ಸಲ್ಲಿಸುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
