ರಾಜಸ್ಥಾನ:

ತಮ್ಮ ಖಾಸಗಿ ವಿಷಯವಾದ ಬಾಡಿ ಫಿಟ್ನೆಸ್ ಕುರಿತು ಹೇಳಿಕೆ ನೀಡಿ ಅವಮಾನವಾಗುವಂತೆ ಮಾಡಿದ್ದ ಶರದ್ ಯಾವದ್ ಅವರ ವಿರುದ್ಧ ವಸುಂದರಾ ರಾಜೇ ತೀವ್ರವಾಗಿ ಆಕ್ರೋಶಗೊಂಡಿದ್ದಾರೆ.
ಪ್ರಚಾರಸಭೆಯೊಂದರಲ್ಲಿ ಮಾತನಾಡಿದ್ದ ಯಾದವ್ ಅವರು, ವಸುಂದರಾ ರಾಜೇ ಅವರಿಗೆ ವಿಶ್ರಾಂತಿಯ ಅಗತ್ಯ ಇದೆ ಎಂದು ವ್ಯಂಗ್ಯವಾಡಿದ್ದರು. ಅವರಿಗೆ ಅವರ ಆರೋಗ್ಯ ಹಾಗೂ ದೇಹದ ಸೌಂದರ್ಯದ ಕುರಿತು ಕಾಳಜಿ ವಹಿಸಲು ಸಮಯವೇ ಇಲ್ಲವಾಗಿದೆ. ಆ ಕಾರಣಕ್ಕಾದರೂ ನೀವು ಈ ಬಾರಿ ಬಿಜೆಪಿಗೆ ವಿಶ್ರಾಂತಿ ನೀಡಲೇಬೇಕು ಎಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.
ಸಿಎಂ ವಸುಂದರಾ ರಾಜೇ ಅವರಿಗೆ ಬಹಳ ಆಯಾಸವಾದಂತೆ ಕಾಣುತ್ತಿದ್ದಾರೆ. ಅವರಿಗೆ ರಾಜಕೀಯದಿಂದ ಸ್ವಲ್ಪ ಬಿಡುವು ನೀಡೋಣ ಎಂದು ಹೇಳಿದ್ದಾರೆ. ಮೊದಲೆಲ್ಲಾ ಪಾಪ ಸಣ್ಣಗೆ ಇದ್ದರು. ಈಗ ತಮ್ಮ ಬಗ್ಗೆ ಕಾಳಜಿ ವಹಿಸಲು ಬಿಡುವಿಲ್ಲದೆ. ಯಾವ ರೀತಿ ದಪ್ಪಾಗಾಗಿದ್ದಾರೆ ನೋಡಿ ಎಂದು ಹಾಸ್ಯ ಮಾಡುವ ಮೂಲಕ ಟೀಕೆ ಮಾಡಿದ್ದಾರೆ. ಆಕೆ ನಮ್ಮ ಮಧ್ಯಪ್ರದೇಶದ ಮಗಳು, ಆಕೆಯ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿಯೂ ಹೌದು ಎಂದು ಗೇಲಿ ಮಾಡಿದ್ದರು ಎಂದು ವರದಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
