ನಿಮ್ಮನ್ನು ನೀವು ನಂಬಿ : ಸ್ವಾಮಿ ವಿರೇಶಾನಂದ ಸರಸ್ವತಿ

ತುಮಕೂರು:

  ಇಂದಿನ ಯುವಜನತೆಯಜೀವನದ ಗುರಿಗಳು ದೊಡ್ಡದಾಗಿರಲಿ, ಗುರಿಯೆಡೆಗೆ ಸಾಗುವ ಹಾದಿ ಉತ್ತಮವಾಗಿರಲಿ. ನಿಮ್ಮನ್ನು ನೀವು ನಂಬುವುದೇ ನಿಮ್ಮಅತಿದೊಡ್ಡಯಶಸ್ಸು.ನಿಮ್ಮ ವಯಸ್ಸು ಹಾಳಾಗಬಾರದು ಎಂದುಸ್ವಾಮಿ ವಿರೇಶಾನಂದ ಸರಸ್ವತಿಅವರುಎಚ್ಚರಿಸಿದರು.

 ತುಮಕೂರು ವಿಶ್ವವಿದ್ಯಾನಿಲಯದ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರಅಧ್ಯಯನ ಪೀಠ, ತುಮಕೂರು ವಿಶ್ವವಿದ್ಯಾನಿಲಯ ಹಾಗೂ ರಾಮಕೃಷ್ಣ-ಸ್ವಾಮಿ ವಿವೇಕಾನಂದಆಶ್ರಮ ಇವುಗಳ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ 156ನೇ ಜನ್ಮದಿನದ ಪ್ರಯುಕ್ತಯುವ ಸಪ್ತಾಹ ಉದ್ಘಾಟನಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

   ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರಾಮಕೃಷ್ಣ-ಸ್ವಾಮಿ ವಿವೇಕಾನಂದಆಶ್ರಮದ ಶ್ರೀ ವಿರೇಶಾನಂದ ಸರಸ್ವತಿಅವರು, ಇಂದಿನ ಯುವಕರನ್ನು ನೋಡುವುದಾದರೆಅವರಲ್ಲಿಶೇ.75ರಷ್ಟು ಯುವಕರು ಬಿಡಾಡಿ ದನಗಳು, ಶೇ.25ರಷ್ಟು ಹುಲಿಗಳು, ಹುಲಿಗಳಾಗಲು ಹೊರಟವರು.ಕೆಲವರುಎಲ್ಲವೂಇದ್ದುದರಿದ್ರರಂತೆ ಬದುಕುವಂತವರು, ಏನೂ ಇಲ್ಲದೆಯೂ ಬದುಕಿನಲ್ಲಿ ಶ್ರಮಪಟ್ಟು ಮಹಾತ್ಮರಾಗುವಂತವರುಎಂದು ಶ್ರೀಗಳು ಅಭಿವ್ಯಕ್ತಿಸಿದರು.

  ಆಂಗ್ಲರ ಶಿಕ್ಷಣ ಭಾರತೀಯರನ್ನು ಮೂರ್ಖರನ್ನಾಗಿಸಿದೆ,ಭಾರತೀಯ ಮೂಲ ವಿಷಯದ ಬಗ್ಗೆ ಮೊದಲು ನಂಬು ನಂತರ ಪರೀಕ್ಷಿಸು, ನಂತರ ನಂಬು ಎಂಬ ಸ್ವಾಮಿ ವಿವೇಕಾನಂದರ ಮಾತನ್ನುನೆನಪಿಸಿದರು.ಅಲ್ಲದೇಸ್ವಾಮಿ ವಿವೇಕಾನಂದರುತಮ್ಮಜೀವಮಾನದಲ್ಲಿ 768 ಪತ್ರಗಳನ್ನು ರಾಷ್ಟ್ರದ ಏಳಿಗೆಗಾಗಿ ಬರೆದಿದ್ದು, ಅವರನ್ನು ನೆನಪಿಸಿಕೊಳ್ಳುವ ಸ್ಥಳಗಳು ಸಾವಿರಾರು.ತಮ್ಮ 39 ವರ್ಷದಲ್ಲಿ ಈ ರೀತಿಯ ಸಾಧನೆ ಹೊಂದಿದಅವರು ಇಂದಿನ ಯುವಜನಾಂಗಕ್ಕೆ ಸ್ಪೂರ್ತಿಯಚಿಲುಮೆಯಾಗಿದ್ದಾರೆಎಂದರು.

    ಅಧ್ಯಕ್ಷೀಯ ಭಾಷಣವನ್ನು ಮಾಡಿದವಿವಿ ಕುಲಪತಿ ಪ್ರೊ.ವೈ.ಎಸ್. ಸಿದ್ಧೇಗೌಡಅವರು, ಇಂದಿನ ಸ್ಪರ್ಧಾತ್ಮಕಯುಗದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಸ್ಪೂರ್ತಿದಾಯಕ.ಅವನ್ನು ನಮ್ಮ ಬದುಕಿನಲ್ಲಿಅಳವಡಿಸಿಕೊಂಡು ಕೌಶಲ್ಯಮತಿಗಳಾಗಬೇಕಿದೆ.ನಮ್ಮಕೌಶಲ್ಯಕ್ಕೆಕೊರತೆಇಲ್ಲ. ಆದರೆ ಸಾಧಿಸುವಛಲದಕೊರತೆಎಲ್ಲೆಡೇಎದ್ದುಕಾಣುತ್ತಿದೆ.ನಮ್ಮಗುರಿ ಸುಖಪಡುವಂತದ್ದಾಗಿರದೇ, ಶ್ರಮದಿಂದಜ್ಞಾನವನ್ನು ಗಳಿಸುವಂತದ್ದಾಗಿರಬೇಕುಎಂದು ತಿಳಿಸಿದರು.ಜೊತೆಗೆವಿವೇಕಾನಂದರುರಾಷ್ಟ್ರ ನಿರ್ಮಾಣಕ್ಕೆಅಗತ್ಯವಾದತಾತ್ವಿಕತೆಯನ್ನು ನೀಡಿದ್ದಾರೆ. ಇದನ್ನು ಬಳಸಿಕೊಂಡುಯುವಕರುತಮ್ಮ ಬುದ್ದಿಶಕ್ತಿಯನ್ನುಉತ್ಪಾದನೆಯಕಡೆಗೆಕೊಂಡೊಯ್ಯಬೇಕು.ಆಗ ಮಾತ್ರ ಬದುಕು ಸಾರ್ಥಕಗೊಳ್ಳುತ್ತದೆ, ಉಜ್ವಲ ರಾಷ್ಟ್ರದ ನಿರ್ಮಾಣವಾಗುತ್ತದೆಎಂದರು.

      ಪ್ರಪಂಚದಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯಯುವಕರಸಾಧನೆಗಣನೀಯವಾದದ್ದು.ಯುವಕರಿಂದರಾಷ್ಟ್ರಕ್ಕೆ ಭವಿಷ್ಯವಿದೆ. ಜ್ಞಾನ, ವಿಜ್ಞಾನ, ತಂತ್ರಜ್ಞಾನದಜೊತೆಗೆಆಧ್ಯಾತ್ಮಿಕತೆಯನ್ನು ರೂಢಿಸಿಕೊಂಡರೆ ಮತ್ತಷ್ಟುಉತ್ತಮಜೀವನ ರೂಪಿಸಿಕೊಳ್ಳಬಹುದುಎಂದುಕರೆನೀಡಿದರು.
ಕರ್ನಾಟಕರಾಜ್ಯಉನ್ನತ ಶಿಕ್ಷಣ ಪರಿಷತ್ತಿನ ವಿಶೇಷ ಅಧಿಕಾರಿಗಳಾದ ಡಾ. ಬಿ. ವೈ.ತೇಜಸ್ವಿನಿಅವರುತಮ್ಮ ವಿಶೇಷ ಉಪನ್ಯಾಸದಲ್ಲಿಯುವಶಕ್ತಿದೇಶದ ಸಂಪತ್ತು, ನಮ್ಮದುಯುವಕರಿಂದಕೂಡಿದದೇಶ.

     ನಮಗೆ ಸ್ವಾಮಿ ವಿವೇಕಾನಂದರಂತಹಯುವಕರು ಬೇಕಾಗಿದ್ದಾರೆ.ಸ್ತ್ರೀಯರಿಗೂ ಆಧುನಿಕ ಶಿಕ್ಷಣ ಬೇಕು, ಸ್ತ್ರೀ ಪುರುಷರುಇಬ್ಬರೂ ಸಮಾಜದ ಸಂಪೂರ್ಣಅಭಿವೃದ್ಧಿಗೆಅತ್ಯಗತ್ಯಎನ್ನುವ ವಿವೇಕಾನಂದರ ವಾಣಿಯನ್ನು ನಾವು ಮನನ ಮಾಡಿಕೊಳ್ಳಬೇಕು.ಶಿಕ್ಷಣ ಎಂದರೆ ಪರಿಪಕ್ವತೆಯನ್ನು ಹೊರಹಾಕುವುದು, ಶಿಕ್ಷಣದಿಂದ ಚಾರಿತ್ರ್ಯ ನಿರ್ಮಾಣವಾಗಬೇಕು.ಉತ್ತಮ ನಾಯಕನಾಗಲು ಮೂರು ಗುಣಗಳ ಅವಶ್ಯಕತೆಇದೆ. ಅವುಗಳೆಂದರೆ ಹೃದಯ ವೇದನೆ, ಮರುಕವನ್ನುಕಾರ್ಯಕಾರಿಯಾಗಿಸುವುದು ಹಾಗೂ ಎಡರುಗಳನ್ನು ಜಯಿಸುವುದು. ‘ಏಳಿ ಎದ್ದೇಳಿ, ಗುರಿ ಮುಟ್ಟುವತನಕ ನಿಲ್ಲದಿರಿ’ ಎಂದುವಿವೇಕವಾಣಿಯನ್ನು ಪುನರುಚ್ಚರಿಸಿದರು.
ಕಾರ್ಯ ಕ್ರಮದಲ್ಲಿ ಸ್ವಾಮಿ ವಿವೇಕಾನಂದರಅಧ್ಯಯನ ಪೀಠ ನಿರ್ದೇಶಕರಾದ ಪ್ರೊ.ಎಂ.ಕೊಟ್ರೇಶ್ ಹಾಗೂ ವಿವಿ ವಿಜ್ಞಾನಕಾಲೇಜು ಪ್ರಾಂಶುಪಾಲರಾದ ಪ್ರೊ.ಡಾ. ಶಾಲಿನಿ ಅವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap