ನವದೆಹಲಿ
ಪ್ರತಿ ತಿಂಗಳು 200 ಯೂನಿಟ್ ಮತ್ತು ಅದಕ್ಕಿಂತ ಕಡಿಮೆ ವಿದ್ಯುತ್ ಉಪಯೋಗಿಸುವ ಗ್ರಾಹಕರು ತಮ್ಮ ವಿದ್ಯುತ್ ಬಿಲ್ ಪಾವತಿಸಬೇಕಾಗಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಪ್ರಕಟಿಸಿದ್ದಾರೆ. 200 ಯುನಿಟ್‌ಗಳವರೆಗೆ ವಿದ್ಯುತ್ ಬಳಸುವವರಿಗೆ ದೆಹಲಿ ಸರ್ಕಾರ ಸಂಪೂರ್ಣ ಸಬ್ಸಿಡಿ ನೀಡಲಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
201 ರಿಂದ 401 ಯುನಿಟ್ ವಿದ್ಯುತ್ ಸೇವಿಸುವವರು ಸರ್ಕಾರದಿಂದ ಶೇ 50 ರಷ್ಟು ವಿದ್ಯುತ್ ಸಬ್ಸಿಡಿ ಪಡೆಯುವುದನ್ನು ಮುಂದುವರಿಸುತ್ತಾರೆ ಎಂದಿದ್ದಾರೆ. ಕೇಜ್ರಿವಾಲ್ ಅವರು ಇನ್ನೂ ಮುಂತಾದ ಫ್ರೀ ಯೋಜನೆ ಮುಖಾಂತರ ದೆಹಲಿ ಜನರ ಮನಸ್ಸನ್ನು ಗೆಲ್ಲಲ್ಲು ಪ್ರಯತ್ನಿಸುತ್ತಿದ್ದಾರೆ ಎಂದು ವಿರೋಧಿಗಳು ಕಿಡಿಕಾರಿದ್ದಾರೆ ಮತ್ತು ಇದೆಲ್ಲಾ ಚುನಾವಣಾ ಪೂರ್ವ ಗಿಮಿಕ್ ಎಂದು ಸಹ ಹೇಳಿದ್ದಾರೆ.