ಮುಂಬೈ
ಕೋವಿಡ್-19 ಸೋಂಕಿಗೆ ತುತ್ತಾಗಿದ್ದ ದಬಾಂಗ್ ಚಿತ್ರದಲ್ಲಿ ನಟಿಸಿದ ಬಾಲಿವುಡ್ ನಟಿ ಮಲೈಕಾ ಅರೋರಾ, ತಾವು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ಭಾನುವಾರ ತಿಳಿಸಿದ್ದಾರೆ.
ಮಾಸ್ಕ್ ಧರಿಸಿರುವ ತಮ್ಮ ಭಾವಚಿತ್ರವೊಂದನ್ನು ತಮ್ಮ ಇನ್ -ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬಹಳ ದಿನಗಳ ನಂತರ ಕೊನೆಗೂ ನನ್ನ ಕೋಣೆಯಿಂದ ಹೊರಬಂದಿದ್ದೇನೆ. ಅದು ಸ್ವತಃ ಒಂದು ವಿಹಾರದಂತೆ ಭಾಸವಾಗುತ್ತಿದೆ. ಕಡಿಮೆ ನೋವು ಮತ್ತು ಅಸ್ವಸ್ಥಗೊಳ್ಳದೇ ಈ ವೈರಸ್‌ನಿಂದ ಹೊರಬರಲು ನನಗೆ ತುಂಬಾ ಆಶೀರ್ವಾದ ದೊರಕಿದೆ. ವೈದ್ಯರು ಮತ್ತು ಅವರ ಮಾರ್ಗದರ್ಶನಕ್ಕಾಗಿ, ಯಾವುದೇ ತೊಂದರೆ ಎದುರಾಗದಂತೆ ಮಾಡಿದ್ದಕ್ಕಾಗಿ ಬಿಎಂಸಿಗೆ, ಅಪಾರ ಬೆಂಬಲ ನೀಡಿದ ನನ್ನ ಕುಟುಂಬ, ಸ್ನೇಹಿತ ವೃಂದ್ಧ, ನೆರೆಹೊರೆಯವರು, ಅಭಿಮಾನಿಗಳ ಶುಭ ಹಾರೈಕೆಗಳಿಗಾಗಿ, ಸಂದೇಶ ಮತ್ತು ಬೆಂಬಲದ ಮೂಲಕ ನಿಮ್ಮಿಂದ ನಾನು ಪಡೆದ ಶಕ್ತಿಗಾಗಿ ಎಲ್ಲರಿಗೂ ಧನ್ಯವಾದಗಳು. ಈ ಸಂಕಷ್ಟದ ಸಮಯದಲ್ಲಿ ನೆರವಾದ ಪ್ರತಿಯೊಬ್ಬರಿಗೂ ನಾನು ಪದಗಳಲ್ಲಿ ಧನ್ಯವಾದ ಅರ್ಪಿಸಲಾರೆ. ನೀವೆಲ್ಲರೂ ಸುರಕ್ಷಿತವಾಗಿರೊಂದಿಗೆ ನಿಗಾ ವಹಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








