ಮಾರುತಿ ಸುಜುಕಿಯಿಂದ 3000 ಉದ್ಯೋಗ ಕಡಿತ.!

ನವದೆಹಲಿ:

       ಮಾರುತಿ ಸುಜುಕಿ ಅಧ್ಯಕ್ಷ ಆರ್.ಸಿ.ಭಾರ್ಗವ ಮಾತನಾಡಿ ಪ್ರಸ್ತುತ ವಾಹನೋಧ್ಯಮದ ಪರಿಸ್ಥಿತಿಯಿಂದಾಗಿ ಮಾರುತಿ ಕಂಪನಿಯೂ ತನ್ನ ಘಟಕದಲ್ಲಿ ಕೆಲಸ ಮಾಡುತ್ತಿರುವ ಸುಮಾರು 3000 ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದೆ .

      ಬೇಡಿಕೆಯ ಕುಸಿತದ ಮಧ್ಯೆ ವಾಹನ ತಯಾರಕರು ಹೆಚ್ಚುತ್ತಿರುವ ತಯಾರಿಕೆ ಬೆಲೆಗಳು ಮತ್ತು ತಗ್ಗುತ್ತಿರುವ ಬೇಡಿಕೆ ಎದುರಿಸಲು  ಕಂಪನಿಯು 3,000 ಉದ್ಯೋಗಿಗಳ ಒಪ್ಪಂದಗಳನ್ನು ನವೀಕರಿಸಲು ಹಿಂದೇಟು ಹಾಕಿದ್ದು ಇದರಿಂದಾಗಿ ಅಷ್ಟೂ ಜನ ಕೆಲಸ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

      ಸುರಕ್ಷತಾ ನಿಯಮಗಳು ಮತ್ತು ಹೆಚ್ಚಿದ ತೆರಿಗೆಗಳು ಕಾರುಗಳ ಬೆಲೆ ಏರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಮತ್ತು ಇದನ್ನು ಸರಿದೂಗಿಸಲು ನಮಗೆ ಉದ್ಯೋಗ ಕಡಿತ ಬಿಟ್ಟು ಬೇರೆ ದಾರಿ  ಇಲ್ಲಾ ಎಂದು ಭಾರ್ಗವ ಅವರು ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರಿಗೆ ತಿಳಿಸಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link