ಶ್ರೀನಗರ: 

ನಾನಾ ರೀತಿಯ ದಾಳಿಗಳನ್ನು ನಡೆಸಿ ಭಾರತೀಯ ಸೇನೆಗೆ ಭೀತಿ ಹುಟ್ಟಿಸಲು ಯತ್ನ ನಡೆಸುತ್ತಿದ್ದ ಪಾಕಿಸ್ತಾನ ಈಗ ಮಸೂದ್ ಅಝರ್ ಸ್ಥಾಪಿಸಿರುವ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮೂಲಕ ಕಾಶ್ಮೀರಕ್ಕೆ ಸ್ನಿಪ್ಪರ್ ಗಳನ್ನು ರವಾನಿಸಿದೆ ಎಂಬ ಆತಂಕಕಾರಿ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ.
ರಹಸ್ಯ ಸ್ಥಳದಳಲ್ಲಿ ಕುಳಿತು ನಿಖರವಾಗಿ ದಾಳಿ ನಡೆಸುವ ಹಂತಕರು/ಶಾರ್ಪ್ ಶೂಟರ್ ಗಳನ್ನು ಸ್ನೈಪರ್ ಗಳೆಂದು ಕರೆಯಲಾಗುತ್ತದೆ. ರೈಫಲ್ ಅಥವಾ ಗನ್ ಮೂಲಕ ದೂರದಿಂದಲೇ ನಿಖರವಾಗಿ ದಾಳಿ ನಡೆಸುವ ಕುರಿತು ಇವರಿಗೆ ತರಬೇತಿ ನೀಡಲಾಗಿರುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
