ಸರ್ಕಾರಿ ಅಧಿಕಾರಿಗೆ ಕಿರುಕುಳ ನೀಡಿದ ಶಾಸಕನ ವಿರುದ್ದ ಪ್ರಕರಣ ದಾಖಲು..!

ಅಮರಾವತಿ:

    ನೆಲ್ಲೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಕೋಟಂ ರೆಡ್ಡಿ ಶ್ರೀಧರ್ ಮತ್ತು ಪಕ್ಷದ ವಕ್ತಾರ ಬಿ.ಶ್ರೀಕಾಂತ್ ವಿರುದ್ಧ ಎದ್ದಿರುವ ಆರೋಪವು ಆಂಧ್ರ ರಾಜಕೀಯದಲ್ಲಿ ದೊಡ್ಡ ಪ್ರಮಾಣದ ಬಿರುಗಾಳಿಯನ್ನೆ ಎಬ್ಬಿಸಿದೆ.

    ಶ್ರೀಧರ್ ರೆಡ್ಡಿ ಮತ್ತು ಶ್ರೀಕಾಂತ್ ಅವರು ತಮ್ಮ ಪ್ರಭಾವ ಬಳಸಿಕೊಂಡು ನಮ್ಮ ನಿವಾಸಕ್ಕೆ ನೀರು, ವಿದ್ಯುತ್ ಮತ್ತು ದೂರದರ್ಶನ ಸಂಪರ್ಕವನ್ನು ಸಂಪರ್ಕ ಕಡಿತಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ನೆಲ್ಲೂರು ಜಿಲ್ಲೆಯ ಎಂಪಿಡಿಒ ಸರಳಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

     ಶ್ರೀಕಾಂತ್ ರೆಡ್ಡಿ ಅವರು ನೂತನವಾಗಿ ನಿರ್ಮಿಸಿರುವ ಲೇಔಟ್ ಗೆ ನೀರು ಮತ್ತು ಇನ್ನಿತರೆ ಸೌಲಭ್ಯಕ್ಕಾಗಿ ಸಲ್ಲಿಸಿದ್ದರು ಆದರೆ ನಿಯಮಗಳ ಪ್ರಕಾರ ಸ್ಥಳ ಪರಿಶೀಲನೆ ಮಾಡದೆ ಅನುಮತಿ ನೀಡಲು ನಿರಾಕರಿಸಿದ ಸರ್ಲಾ ಅವರ ಕ್ರಮಕ್ಕೆ ಕ್ರೊದಗೊಂಡ ಶ್ರೀಕಾಂತ ಅವರು ಈ ರೀತಿಯ ಕೃತ್ಯಗಳಿಗೆ ಕೈ ಹಾಕಿದ್ದಾರೆ ಎಂದು ಸರ್ಲಾ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link