ಅಮೇಥಿ :
ಮಾರ್ಚ್ 4ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಲೋಕಸಭಾ ಅಖಾಡವಾಗಿರುವ ಅಮೇಥಿಗೆ ಮೋದಿ ಭೇಟಿ ನೀಡಲಿದ್ದಾರೆ.
ಕೋರ್ಬಾ ಮುನ್‌ಶಿಗಂಜ್ ನಲ್ಲಿ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೋದಿ ನಂತರದಲ್ಲಿ ಗೌರೀಗಂಜ್ ನ ಕೋಹರ್ ಪ್ರದೇಶದಲ್ಲಿ ಏರ್ಪಾಟಾಗಿರುವ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ ಎಂದು ಅಮೇಥಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಚಾಲಕ ರಾಜೇಶ್ ಅಗ್ರಹಾರಿ ಇಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ