ಫೋರ್ಬ್ಸ್ ಇಂಡಿಯಾ: ಸ್ಥಾನ ಉಳಿಸಿಕೊಂಡ ಮುಖೇಶ್ ಅಂಬಾನಿ

ಮುಂಬೈ

    ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಫೋರ್ಬ್ಸ್‌ನ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಈ ವರ್ಷವೂ ಸತತ 12 ನೇ ಬಾರಿಗೆ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಈ ವರ್ಷ ಅವರ ಒಟ್ಟು ಆಸ್ತಿ ಮೌಲ್ಯ 51.4 ಶತಕೋಟಿ ಡಾಲರ್‌ಗೆ ಏರಿದೆ.

   ‘ಅಂಬಾನಿ ಅವರು ತಮ್ಮ ಆಸ್ತಿಗೆ 4.1 ಬಿಲಿಯನ್ ಡಾಲರ್‌ ಹೆಚ್ಚುವರಿ ಸೇರಿಸಿದ್ದಾರೆ. ತಮ್ಮ ರಿಲಯನ್ಸ್ ಇಂಡಸ್ಟ್ರೀಸ್‌ನ ಮೂರು ವರ್ಷದ ಹಳೆಯ ಟೆಲಿಕಾಂ ಘಟಕವಾದ ಜಿಯೋ, 340 ದಶಲಕ್ಷ ಚಂದಾದಾರರನ್ನು ಹೊಂದಿರುವ ಭಾರತದ ಅತಿದೊಡ್ಡ ಮೊಬೈಲ್ ಸೇವಾ ಕಂಪೆನಿಗಳಲ್ಲಿ ಒಂದಾಗಿದೆ.’ ಎಂದು ಫೋರ್ಬ್ಸ್ ಹೇಳಿದೆ.

   ಆರ್ಥಿಕ ಕುಸಿತದಿಂದಾಗಿ ದೇಶದ ಶ್ರೀಮಂತರಿಗೆ ಈ ವರ್ಷ ದೊಡ್ಡ ಸವಾಲಿನ ವರ್ಷವಾಗಿದೆ. 2019 ರ ಪಟ್ಟಿಯಲ್ಲಿ ಉದ್ಯಮಿಗಳ ಒಟ್ಟು ಸಂಪತ್ತಿನಲ್ಲಿ ಶೇ8 ರಷ್ಟು ಕುಸಿತ ಕಂಡಿದೆ. ಇದು 452 ಶತಕೋಟಿ ಡಾಲರ್‌ ಆಗಿದೆ ಎಂದು ಫೋರ್ಬ್ಸ್‌ ಹೇಳಿದೆ. ಈ ಪಟ್ಟಿಯಲ್ಲಿ ಅಂಬಾನಿ ಮತ್ತು ಅದಾನಿ ನಂತರ ಅಶೋಕ್ ಲೇಲ್ಯಾಂಡ್ ಮಾಲೀಕರಾದ ಹಿಂದೂಜಾ ಸಹೋದರರು, ಶಪೂರ್ಜಿ ಪಲ್ಲೊಂಜಿ ಗ್ರೂಪ್‌ನ ಪಲ್ಲೊಂಜಿ ಮಿಸ್ತ್ರಿ, ಕೊಟಕ್ ಮಹೀಂದ್ರಾ ಬ್ಯಾಂಕಿನ ಉದಯ್ ಕೊಟಕ್ ಹಾಗೂ ಎಚ್‌ಸಿಎಲ್ ಟೆಕ್ನಾಲಜೀಸ್‌ನ ಶಿವ ನಾಡರ್ ನಂತರದ ಸ್ಥಾನಗಳಲ್ಲಿದ್ದಾರೆ. 4 ಶತಕೋಟಿ ಡಾಲರ್‌ ಮೊತ್ತದ ಆಸ್ತಿ ಏರಿಕೆಯಿಂದ ಉದಯ್ ಕೊಟಕ್ ಮೊದಲ ಬಾರಿಗೆ ಮೊದಲ ಐದು ಸ್ಥಾನಕ್ಕೆ ಏರಿದ್ದಾರೆ.

   ಮೂಲಸೌಕರ್ಯ ವಲಯದ ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತಿನಲ್ಲೂ ಗಣನೀಯ ಹೆಚ್ಚಳವಾಗಿದೆ. 15.7 ಶತಕೋಟಿ ಡಾಲರ್ ಮೌಲ್ಯದ ಆಸ್ತಿ ಏರಿಕೆಯೊಂದಿಗೆ ಹಿಂದಿನ ವರ್ಷ ಎಂಟನೇ ಸ್ಥಾನದಲ್ಲಿದ್ದ ಅದಾನಿ, ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap