ಮುಂಬೈ ಬ್ಲಾಸ್ಟ್ ನ ರೂವಾರಿ ಡಾ.ಬಾಂಬ್ ನಾಪತ್ತೆ..!

ಮುಂಬೈ

     1993ರಲ್ಲಿ ಮುಂಬೈನಲ್ಲಿ ನಡೆದಿದ್ದ ಸರಣಿ ಸ್ಫೋಟದ ಪ್ರಮುಖ ಅಪರಾಧಿ ಜಾಲಿಸ್ ಅನ್ಸಾರಿ ಅಲಿಯಾಸ್ ಡಾ. ಬಾಂಬ್  ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

    ಇತ್ತೀಚೆಗೆ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದ  ಅನ್ಸಾರಿ (68) ನಾಪತ್ತೆಯಾದ ಬಗ್ಗೆ ಆತನ ಕುಟುಂಬ ಸದಸ್ಯರು  ಮುಂಬೈನ ಅಗ್ರಿಪಾಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಗುರುವಾರ ನಮಾಜ್​ ಮಾಡಿ ಬರುತ್ತೇನೆ ಎಂದು ಹೇಳಿ  ಬೆಳಗ್ಗೆ ಹೋದವರು ಇನ್ನೂ ವಾಪಸ್​ ಮನೆಗೆ ಬಂದಿಲ್ಲ ಎಂದು ಆತನ ಮಗ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ರಾಜಸ್ಥಾನದ ಅಜ್ಮೇರ್​ ಸೆಂಟ್ರಲ್​ ಜೈಲಿನಲ್ಲಿದ್ದ ಅನ್ಸಾರಿ 21ದಿನಗಳ ಪೆರೋಲ್​ ಪಡೆದು ಹೊರಬಂದಿದ್ದರು. ಗುರುವಾರ ಬೆಳಗ್ಗೆ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. 1993ರ ಮಾರ್ಚ್​ 12ರಂದು ಮುಂಬೈನಲ್ಲಿ ನಡೆದ ಭೀಕರ ಸರಣಿ ಸ್ಫೋಟದ ಮುಖ್ಯ ರೂವಾರಿ ಈ ಜಾಲಿಸ್​ ಅನ್ಸಾರಿ.ಈ ಬಾಂಬ್​ ಬ್ಲಾಸ್ಟ್​ನಲ್ಲಿ 250 ಮಂದಿ ಮೃತಪಟ್ಟಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ