ನವದೆಹಲಿ
ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಇನ್ನಿತರರ ವಿರುದ್ಧದ ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆಯನ್ನು ಕೋರಿಕೆ ಮೇರೆಗೆ ಜುಲೈ 5ಕ್ಕೆ ಮುಂದೂಡಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ರೋಸ್ ಅವೆನ್ಯೂದಲ್ಲಿರುವ ಅಡಿಷನಲ್ ಚೀಫ್ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಶನಿವಾರ ವಿಚಾರಣೆಗೆಂದು ನಿಗದಿಪಡಿಸಲಾಗಿತ್ತು.
ಕೋರಿಕೆಯ ಮೇರೆಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆಯನ್ನು ಮುಂದೂಡಿ ತೀರ್ಪು ನೀಡಿದೆ. ಪ್ರತಿವಾದಿ ವಕೀಲರು ದೂರುದಾರರಾಗಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರನ್ನು ಪ್ರಶ್ನೆಗೆ ಒಳಪಡಿಸಬೇಕಿತ್ತು. ಲೋಕಸಭೆ ಚುನಾವಣೆಗಳು ಚಾಲ್ತಿಯಲ್ಲಿ ಇರುವುದರಿಂದ ಪ್ರಕರಣದ ಮುಂದೂಡಿಕೆಗೆ ದೂರುದಾರ ಸುಬ್ರಮಣಿಯನ್ ಸ್ವಾಮಿ ಮತ್ತು ಇತರೆ ಆರೋಪಿಗಳು ಮನವಿ ಮಾಡಿದ್ದರು ಎಂದು ವಕೀಲರೊಬ್ಬರು ತಿಳಿಸಿದ್ದಾರೆ.
ಸೋನಿಯಾ ಮತ್ತು ರಾಹುಲ್ ಗಾಂಧಿ ಅವರ ಪರ ವಕೀಲರಾದ ಆರ್‌ಎಸ್ ಚೀಮಾ ಅವರು ಫೆಬ್ರವರಿ 4ರಂದು ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಾಸ್ ಎಕ್ಸಾಮಿನೇಷನ್‌ನಲ್ಲಿ ಸುಬ್ರಮಣಿಯನ್ ಸ್ವಾಮಿ ಅವರಿಗೆ 18 ಪ್ರಶ್ನೆಗಳನ್ನು ಕೇಳಿದ್ದರು. ರಾಹುಲ್ ಮತ್ತು ಸೋನಿಯಾ ಹಾಗೂ ಇತರರ ವಿರುದ್ಧ ವಂಚನೆ ಸಂಚಿನ ಪ್ರಯತ್ನ ಮತ್ತು ಹಣಕಾಸು ನಿಧಿಯ ದುರ್ಬಳಕೆ ಪ್ರಕರಣವನ್ನು ಸ್ವಾಮಿ ಅವರು 2012ರಲ್ಲಿ ದಾಖಲಿಸಿದ್ದರು. ನ್ಯಾಷನಲ್ ಹೆರಾಲ್ಡ್ ಸುದ್ದಿಪತ್ರಿಕೆಯ ಮಾಲೀಕರಾಗಿರುವ ಅಸೋಸಿಯೇಟೆಡ್ ಜರ್ನಲ್ಸ್ ಲಮಿಟೆಡ್‌ಗೆ 90.25 ಕೋಟಿ ರೂಪಾಯಿ ಸಾಲವನ್ನು ಬಡ್ಡಿರಹಿತರವಾಗಿ ಕಾಂಗ್ರೆಸ್ ಪಕ್ಷ ನೀಡಿತ್ತು ಎಂದು ಸ್ವಾಮಿ ಆರೋಪಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








