ಮುಂಬೈ
ಶಿವಸೇನೆಯ ಅಧಿಕೃತ ಪತ್ರಿಕೆ ಎಂದೇ ಕರೆಸಿಕೊಳ್ಳುವ ಸಾಮ್ನಾಗೆ ಇಷ್ಟುದಿನ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಸಂಪಾದಕರಾಗಿದ್ದರು ಆದರೆ ಈ ಆ ಸ್ಥಾನದಿಂದ ಕೆಳಗಿಳಿದು ತಮ್ಮ ಸ್ಥಾನಕ್ಕೆ ತಮ್ಮ ಪತ್ನಿ ರಶ್ಮಿ ಠಾಕ್ರೆ ಅವರನ್ನು ಸಂಪಾದಕಿಯಾಗಿ ನೇಮಿಕ ಮಾಡಿದ್ದಾರೆ.
ಪ್ರಬೋಧನ್ ಪ್ರಕಾಶನದಿಂದ ಹೊರ ಬರುವ ಸಾಮ್ನಾ ಸಂಸ್ಥೆಯ ದಿನಪತ್ರಿಕೆ ಸಾಮ್ನಾ, ದೋಪಹರ್ ಕಾ ಸಾಮ್ನಾ ಎರಡರ ಜವಾಬ್ದಾರಿಯನ್ನು ರಶ್ಮಿ ನೋಡಿಕೊಳ್ಳಲಿದ್ದಾರೆ. ಬಾಳಾ ಠಾಕ್ರೆ ಅವರ ಆಶಯದಂತೆ ಪತ್ರಿಕೆ ಮುನ್ನಡೆಸಲಿದ್ದಾರೆ ಎಂದು ಉದ್ಧವ್ ಹೇಳಿದ್ದಾರೆ.ಸಂಸ್ಥೆಯ ಪ್ರಕಾಶಕರಾದ ರಾಜೇಂದ್ರ ಎಂ ಭಾಗ್ವತ್ ಅವರು ಈ ಘೋಷಣೆಯನ್ನು ಭಾನುವಾರದ ಆವೃತ್ತಿಯಲ್ಲಿ ಪ್ರಕಟಿಸಿದ್ದಾರೆ. ಟ್ರಸ್ಟಿಗಳಾಗಿ ಸುಭಾಷ್ ದೇಸಾಯಿ ಹಾಗೂ ಲೀಲಾಧರ್ ಬಿ ಡಾಕೆ ಅವರನ್ನು ಹೆಸರಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/03/27_11_2019-rashmi_thakery_19794994_82938894.gif)