ನವದೆಹಲಿ:
ದೇಶಿ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಪಾರುಪತ್ಯವನ್ನು ಹೊಂದಿರುವ ಮಾರುತಿ ಸುಜುಕಿ ಇಂಡಿಯಾ ಸದ್ಯದ ಹೊಸ ಬಿಎಸ್-6 ಮಾನದಂಡ ಹೊಂದಿರುವ ಎಂಜಿನ್ ಒಳಗೊಂಡಿರುವ ಇಗ್ನಿಸ್ ಕಾರನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಅಲ್ಲದೆ ಕಾರಿನ ಮುಂದಿನ ನೋಟವನ್ನು ಸಹ ಬದಲಿಸಲಾಗಿದೆ.ಮಾರುತಿ ಸುಜುಕಿ ಕಂಪನಿಯ ಬಹುನಿರೀಕ್ಷಿತ ಇಗ್ನಿಸ್ ಅನ್ನು ಹೊಸ ವಿನ್ಯಾಸ ಮತ್ತು ಮತ್ತಷ್ಟು ಆಕರ್ಷಕ ಬಣ್ಣಗಳ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಲಾಗಿದೆ.
ಹೊಸ ಇಗ್ನಿಸ್ ಕಾರು ಐಎಂ-4 ಕಾನ್ಸೆಪ್ಟ್ ಅನ್ನು ಆಧರಿಸಿದೆ. ಹಳೆಯ ಮಾದರಿಗೆ ಹೋಲಿಸಿದರೆ ಹಲವಾರು ಬದಲಾವಣೆ ಗಳನ್ನು ಮಾಡಲಾಗಿದೆ. ಇದರಲ್ಲಿ ಮಾರುತಿ ಸುಜುಕಿ ಇಗ್ನಿಸ್ ಫೇಸ್‍ಲಿಫ್ಟ್ ಕಾರಿನ ಮುಂಭಾಗ ಹೊಸ ಬಂಪರ್ ಮತ್ತು ಮರುವಿನ್ಯಾಸ ಮಾಡಲಾಗಿರುವ ಫ್ರಂಟ್ ಗ್ರಿಲ್ ಅನ್ನು ಅಳವಡಿಸಲಾಗಿದೆ. ಇನ್ನು ಕಾರಿನ ಹೆಡ್‍ಲ್ಯಾಂಪ್ ಮತ್ತು ಪ್ರೊಜೆಕ್ಟರ್ ಹಾಗೆಯೇ ಎಲ್ಇಡಿ ಡಿಆರ್‍ಎಲ್‍ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.ಹಿಂಭಾಗದಲ್ಲಿ ಕೆಲವು ಬದಲಾವಣೆ ಗಳನ್ನು ಮಾಡಲಾಗಿದೆ. ಇದರಲ್ಲಿ ಹೊಸ ಟೇಲ್‍ಲ್ಯಾಂಪ್, ನವೀಕರಿಸಿದ ಬಂಪರ್ ಮತ್ತು ರೂಫ್ ರೂಫ್ ಮೌಂಟೆಡ್ ಸ್ಪಾಯ್ಲರ್ ಜೊತೆಗೆ ರಿಫ್ಲೆಕ್ಟರ್‌ಗಳಿವೆ.ಹೊಸ ಇಗ್ನಿಸ್ ಫೇಸ್‍ಲಿಫ್ಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.89 ಲಕ್ಷದಿಂದ ರೂ.7.19 ಲಕ್ಷಗಳಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
