ವಿಜಯ್‌ ದೇವರಕೊಂಡ ಅವರನ್ನು ರಷ್ಮಿಕಾ ಕರೆಯೋದು ಏನಂತಾ ಗೊತ್ತಾ….?

ತೆಲಂಗಾಣ :

    ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದರು. ಈ ಕಾರಣಕ್ಕೆ ಇವರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆಯಿತು. ಈಗ ಗೆಳೆತನ ಪ್ರೀತಿಗೆ ತಿರುಗಿದೆ ಎನ್ನಲಾಗುತ್ತಿದೆ. ಇವರು ಶೀಘ್ರವೇ ಮದುವೆ ಆಗುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಹಾಗಾದರೆ ರಶ್ಮಿಕಾ ಅವರು ವಿಜಯ್ ದೇವರಕೊಂಡ ಅವರನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ? ಆ ಪ್ರಶ್ನೆಗೆ ಉತ್ತರ ಇದೆ. ರಶ್ಮಿಕಾ ಅವರು ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

   ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಮೊದಲ ಬಾರಿಗೆ ‘ಗೀತ ಗೊಂವಿಂದಂ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ರಶ್ಮಿಕಾ ಹಾಗೂ ವಿಜಯ್ ಜೋಡಿ ಸಾಕಷ್ಟು ಗಮನ ಸೆಳೆಯಿತು. ಈ ಜೋಡಿಯನ್ನು ಜನರು ಹೆಚ್ಚು ಇಷ್ಟಪಡೋಕೆ ಆರಂಭಿಸಿದರು. ಆ ಬಳಿಕ ಬಂದ ‘ಡಿಯರ್ ಕಾಮ್ರೇಡ್’ ಚಿತ್ರವು ಅಷ್ಟಾಗಿ ಸದ್ದು ಮಾಡಿಲ್ಲ. ಈಗ ವಿಜಯ್ ಹಾಗೂ ರಶ್ಮಿಕಾ ಮಧ್ಯೆ ಆಪ್ತತೆ ಬೆಳೆದಿದೆ. ಇದು ಬಹುತೇಕರಿಗೆ ಗೊತ್ತಿದೆ.

   ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡಗೆ ಒಂದು ನಿಕ್​ನೇಮ್ ಕೊಟ್ಟಿದ್ದಾರೆ. ಅದುವೇ ವಿಜು. ಹೌದು, ವಿಜಯ್ ದೇವರಕೊಂಡ ಅವರನ್ನು ರಶ್ಮಿಕಾ ಅವರು ಪ್ರೀತಿಯಿಂದ ವಿಜು ಎಂದು ಕರೆಯುತ್ತಾರಂತೆ. ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ಈ ವಿಚಾರ ರಿವೀಲ್ ಮಾಡಿದ್ದಕ್ಕೆ ಅನೇಕರಿಗೆ ಖುಷಿ ಆಗಿದೆ.

   ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ತೆರೆಮೇಲೆ ಮತ್ತೆ ಒಂದಾಗಬೇಕು ಎಂಬುದು ಅನೇಕರ ಕೋರಿಕೆ. ಆದರೆ, ಇದಕ್ಕೆ ಸೂಕ್ತವಾದ ಸ್ಕ್ರಿಪ್ಟ್ ಸಿಕ್ಕಿಲ್ಲ. ಹೀಗಾಗಿ, ಇವರು ಒಟ್ಟಾಗಿ ಸಿನಿಮಾ ಮಾಡಲು ಸಾಧ್ಯವಾಗುತ್ತಿಲ್ಲ. ಶೀಘ್ರವೇ ಇವರ ಕಡೆಯಿಂದ ಈ ವಿಚಾರದಲ್ಲಿ ಗುಡ್ ನ್ಯೂಸ್ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. 

   ‘ಛಾವಾ’ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದಾರೆ. ಈ ಸಿನಿಮಾ ಭಾರತದಲ್ಲೇ 500+ ಕೋಟಿ ರೂಪಾಯಿ ಗಳಿಕೆ ಮಾಡಿ ಗಮನ ಸೆಳೆದಿದೆ. ಈ ಚಿತ್ರದಿಂದ ರಶ್ಮಿಕಾ ದೊಡ್ಡ ಗೆಲುವು ಕಂಡಿದ್ದಾರೆ. ಅವರ ನಟನೆಯ ಮೂರು ಸಿನಿಮಾಗಳು 500 ಕೋಟಿ ರೂಪಾಯಿ ಗಳಿಸಿದೆ.

Recent Articles

spot_img

Related Stories

Share via
Copy link