ಹೈದ್ರಾಬಾದ್ :
ದೇಶದ ಹುಬ್ಬೇರಿಸುವಂತೆ ಮಾಡಿರುವಂತಹ ರಾಜ್ಯ ಚುನಾವಣೆಗಳ ಪೈಕಿ ತೆಲಂಗಾಣ ಕೂಡ ಒಂದು ಚುನಾವಣೋತ್ತರ ವರದಿಗಳ ಪ್ರಕಾರ ತೆಲಂಗಾಣದ ಜನ ತಮ್ಮ ನೆಚ್ಚಿನ ನಾಯಕರಾದ ಕೆ ಸಿ ಆರ್ ಅವರನ್ನೇ ಬೆಂಬಲಿಸುವಂತಹ ಎಲ್ಲಾ ಲಕ್ಷಣಗಳು ನಿಚ್ಚಳವಾಗಿ ಕಾಣುತ್ತಿದ್ದು ಮತ್ತೆ ತೆಲಂಗಾಣದಲ್ಲಿ ಕೆಸಿಆರ್ ಕಾರುಬಾರು ನಡೆಸುವುದು ಖಚಿತ ಎಂದು ಸಮೀಕ್ಷೆಗಳು ತಿಳಿಸಿವೆ ಇದರಿಂದಾಗಿ ತೆಲಂಗಾಣ ಮತ್ತೆ ಗುಲಾಬಿ ರಂಗಿಗೆ ತಿರುಗಲಿದೆ ಎಂದು ಓವೈಸಿ ಆಶಯ ವ್ಯಕ್ತಪಡಿಸಿದ್ದಾರೆ.
ಸ್ಪಷ್ಟ ಬಹುಮತದೊಂದಿಗೆ ಟಿಆರ್ ಎಸ್ ಸರ್ಕಾರ ರಚಿಸುದು ಖಂಡಿತ ಎಂದು ಅಸಾದುದ್ದೀನ್ ಓವೈಸಿ ಭವಿಷ್ಯ ನುಡಿದಿದ್ದಾರೆ .ಮತ ಎಣಿಕೆಯವರೆಗೂ ಕಾಯಬೇಕಾಗಿದೆ. ಎಲ್ಲಾ ಊಹೆಗಳು ನಿರಾಧಾರ ಎಂಬುದು ಗೊತ್ತಾಗಲಿದೆ. ಟಿಆರ್ ಎಸ್ ತನ್ನ ಸ್ವಂತ ಬಲದಿಂದ ಸರ್ಕಾರ ರಚಿಸಲಿದೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ಅವರು ಹೇಳಿದ್ದಾರೆ.ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ಅವರ ಟಿಆರ್ ಎಸ್ ಪಕ್ಷವೇ ಅಧಿಕಾರ ಹಿಡಿಯಲಿದೆ ಎಂದು ಎಲ್ಲಾ ಮತದಾನೋತ್ತರ ಸಮೀಕ್ಷೆಗಳು ಅಂದಾಜಿಸಿವೆ.119 ಸ್ಥಾನಗಳನ್ನು ಹೊಂದಿರುವ ತೆಲಂಗಾಣದಲ್ಲಿ ಟಿಆರ್ ಎಸ್ 66 , ಕಾಂಗ್ರೆಸ್ 37, ಬಿಜೆಪಿ 7 , ಇತರೆ 9 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಸಮಿಕ್ಷೆಗಳು ಉಹಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








