ನವದೆಹಲಿ
ಕೇಂದ್ರದ ಮೋದಿ ಸರ್ಕಾರದ ತಪ್ಪುಗಳು ಹಾಗು ಅವಾಂತರಗಳ ಬಗ್ಗೆ ಬೆಟ್ಟು ಮಾಡಿ ತೂರುವ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತಮ್ಮ ಎಂದಿನ ಶೈಲಿಯಲ್ಲಿಯೇ ಟೀಕಾಪ್ರಹಾರ ನಡೆಸಿದ್ದಾರೆ.
ದೇಶದ ಆರ್ಥಿಕ ಪರಿಸ್ತಿತಿಯನ್ನು ಸಮರ್ಥಿಸಿಕೊಂಡು ಮಾತನಾಡುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಚಿವರುಗಳ ವಿರುದ್ಧ ಹರಿಹಾಯ್ದಿರುವ ಸುಬ್ರಮಣಿಯನ್ ಸ್ವಾಮಿ, ‘ನಿರ್ಮಲಾ ಸೀತಾರಾಮನ್ ಅವರಿಗೆ ಯಾವ ಅರ್ಥಶಾಸ್ತ್ರವೂ ತಿಳಿದಿಲ್ಲ’ ಎಂದು ಹೇಳಿದ್ದಾರೆ.
‘ನೀವು ಆರ್ಥಿಕತೆಯನ್ನು ಒಳ್ಳೆಯ ಕಣ್ಣುಗಳಿಂದ ಗಮನಿಸಿದಾಗ ಆರ್ಥಿಕತೆಯು ತುಸು ಕುಸಿದಿರಬಹುದಾದ ಸ್ಥಿತಿಯನ್ನು ನೀವು ನೋಡುತ್ತೀರಿ. ಆದರೆ ಇದು ಆರ್ಥಿಕ ಹಿಂಜರಿತ ಅಲ್ಲ. ಎಂದಗೂ ಆರ್ಥಿಕ ಹಿಂಜರಿತ ಬರಲಾರದು’ ಎಂದು ನಿರ್ಮಲಾ ಸೀತಾರಾಮನ್ ನ.27ರಂದು ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ, ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿಯೇ ಇಲ್ಲ. ಆರ್ಥಿಕ ಪ್ರಗತಿಯಲ್ಲಿ ತುಸು ಹಿನ್ನಡೆಯಾಗಿದೆಯಷ್ಟೇ ಎನ್ನುವ ಮೂಲಕ ಮೋದಿ ಸರ್ಕಾರದ ಆರ್ಥಿಕ ನೀತಿಯನ್ನು ಸಮರ್ಥಿಸಿಕೊಂಡಿದ್ದರು
ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಬ್ರಮಣಿಯನ್ ಸ್ವಾಮಿಯವರು ನಮ್ಮ ದೇಶದ ವಿಪರ್ಯಾಸವೆಂದರೆ ದೇಶದ ಆರ್ಥಿಕ ಮಂತ್ರಿಗಳಿಗೆ ಆರ್ಥಿಕತೆಯ ಗಂಧ ಗಾಳಿ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ