ಬೆಂಗಳೂರು ರಸ್ತೆಗಳಿಗೆ ವೈಟ್‌ ಟ್ಯಾಪಿಂಗ್‌ : ಬೆಂಗಳೂರಿಗರಿಗೆ ತಪ್ಪದ ಟ್ರಾಫಿಕ್‌ ಕಿರಿಕಿರಿ..!

ಬೆಂಗಳೂರು

     ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ  ವತಿಯಿಂದ ನಗರದ ಹಲವು ರಸ್ತೆಗಳಿಗೆ ವೈಟ್​ ಟಾಪಿಂಗ್​ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ  ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ವಿದ್ಯಾನಗರ ಕ್ರಾಸ್​ನಿಂದ ಬೆಲಕಾಂ ಲೇಔಟ್  ರಸ್ತೆ, ದೇವರಬೀಸನಹಳ್ಳಿ ಸಕ್ರಾ ಆಸ್ಪತ್ರೆ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ವಾಹನ ಸಂಚಾರ ನಿರ್ಬಂಧ ದಿನಾಂಕ, ಪರ್ಯಾಯ ಮಾರ್ಗ ಇಲ್ಲಿದೆ.

    ವಿದ್ಯಾನಗರ ಕ್ರಾಸ್‌ನ ವಿಎನ್​ಎಸ್​ಐಟಿ ಕಾಲೇಜು ಕಡೆಗೆ ಹೋಗುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ ವೈಟ್ ಟಾಪಿಂಗ್ (ಸಿಮೆಂಟ್ ರಸ್ತೆ) ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನವೆಂಬರ್​ 14ರವರೆಗೆ ವಿದ್ಯಾನಗರ ಕ್ರಾಸ್ ನಿಂದ ಬೆಲಕಾಂ ಲೇಔಟ್ (ವೆಂಕಟೇಶ್ವರ ತಾಂತ್ರಿಕ ಕಾಲೇಜ್)ವರೆಗೆ ಸಂಚಾರವನ್ನು ನಿರ್ಭಂದಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link