ಟ್ರಂಪ್ ವಿರುದ್ಧ ಕಿಡಿಕಾರಿದ ಓವೈಸಿ..!

ಹೈದರಾಬಾದ್

   ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಷ್ಟ್ರಪಿತ ಎಂದು ಸಂಭೋಧಿಸುವ ಮೂಲಕ ಭಾರತದ ಇತಿಹಾಸಕ್ಕೆ ಡೊನಾಲ್ಡ್ ಟ್ರಂಪ್ ಅವಮಾನ ಮಾಡಿದ್ದು ಇದನ್ನು ನಾವು ಮುಕ್ತ ಕಂಠದಿಂದ ಪ್ರತಿಭಟಿಸುತ್ತೇವೆ ಎಂದು ಅಸಾದುದ್ದಿನ್ ಓವೈಸಿ ಗುಡುಗಿದ್ದಾರೆ.

   ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡುತ್ತಿದ್ದ ಅಧ್ಯಕ್ಷ ಟ್ರಂಪ್, ‘ನರೇಂದ್ರ ಮೋದಿ ನನಗೆ ಅತ್ಯುತ್ತಮ ಸ್ನೇಹಿತರು. ಅವರು ಭಾರತದ ಪಿತಾಮಹ ಇದ್ದಂತೆ ‘ ಎಂದಿದ್ದರು ಆದರೆ ನನಗೆ ಇಂದಿಗೂ ಅರ್ಥವಾಗ ವಿಷಯ ಎಂದರೆ ಜಗತ್ತಿನ ಎಲ್ಲಾ ರಾಷ್ಟ್ರಗಳೂ ಹೇಳುವಂತೆ ಭಾರತದ ಪಿತಾಮಹ ಗಾಂಧಿಜೀಯವರೇ ಹೊರತು ಮೋದಿಯಲ್ಲ ಎಂದು ಕಿಡಿಕಾರಿದ್ದಾರೆ.

  “ಡೊನಾಲ್ಡ್ ಟ್ರಂಪ್ ಡಬಲ್ ಗೇಮ್ ಆಡ್ತಿದಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ತಮ್ಮ ಗೆಳೆಯ ಎನ್ನುತ್ತಾರೆ, ಅತ್ತ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನೂ ಗೆಳೆಯ ಎನ್ನುತ್ತಾರೆ. ಮೋದಿ ಅವರನ್ನು ಹೊಗಳುವ ಅವಸರದಲ್ಲಿ ಅವರನ್ನು ಭಾರತದ ಪಿತಾಮಹ ಎಂದು ಕರೆಯುವ ಮೂಲಕ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರಿಗೆ ಅವಮಾನ ಮಾಡಿದ್ದಾರೆ” ಎಂದು ಓವೈಸಿ ದೂರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link