ಭಾರತವನ್ನು ಅಣಕಿಸಲು ಹೋಗಿ ಟ್ರೋಲ್ ಆದ ಪಾಕ್ ಸಚಿವ.!

ನವದೆಹಲಿ:

      ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 2 ಯೋಜನೆಯ ತಾತ್ಕಾಲಿಕ ವಿಫಲತೆಯನ್ನು ಅಣಕಿಸಲು ಹೋಗಿ ತಾನೇ ನೆಟ್ಟಿಗರ ಕೈಯಲ್ಲಿ ಟ್ರೋಲ್ ಆಗಿದ್ದಾರೆ ಪಾಕಿಸ್ತಾನದ ಒಬ್ಬ ಸಚಿವರು.

 

  ಇಡೀ ವಿಶ್ವ ನಿನ್ನೆ ರಾತ್ರಿಯಿಡಿ ಚಂದ್ರಯಾನದ ಕುರಿತಾಗಿ ತಲೆಕೆಡಿಸಿಕೊಂಡು ಕುಳಿತಿರುವಾಗ ಕೊನೆಯ ಕ್ಷಣದಲ್ಲಾದ ಪಥ ಬದಲಾವಣೆಯಿಂದಾಗಿ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತು ಇದನ್ನೆ ಗುರಿಯಾಗಿಸಿಕೊಂಡು ಭಾರತದ ಕಾಲೆಳೆಯಲು ಮುಂದಾದ ಪಾಕ್ ಸಚಿವ ಫವಾದ್ ಚೌದರಿ ತಾವು ತೋಡಿದ ಹಳ್ಳಕ್ಕೆ ತಾವೆ ಬಿದ್ದಿದ್ದಾರೆ .ಅವರು ಮಾಡಿದ ಟ್ವೀಟ್ ನಲ್ಲಿ Satellite ಗೆ ಬದಲಾಗಿ Sattelite ಎಂದು ತಪ್ಪಾಗಿ ಬರೆದಿದ್ದರು ಇದನ್ನೆ ಅಸ್ತ್ರವಾಗಿ ಬಳಸಿಕೊಂಡ ಸೋಷಿಯಲ್ ಮೀಡಿಯಾ ಮಂದಿ ಚೌಧರಿಯವರನ್ನು ಬಾರಿ ಟ್ರೋಲ್‌ ಮಾಡುತ್ತಿದ್ದಾರೆ.

     ಸ್ಯಾಟಲೈಟ್  ಎಂದು ಸರಿಯಾಗಿ ಸ್ಪೆಲ್ಲಿಂಗ್ ಬರೆಯಲು ಬಾರದ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್​ ಚೌಧರಿ ಚಂದ್ರಯಾನ-2 ಕುರಿತು ತಿಳಿವಳಿಕೆ ನೀಡುತ್ತಿದ್ದಾರೆ ಎಂದು ಟ್ವೀಟಿಗರು ಅಣಕಿಸಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ