ಅಹ್ಮದ್ ನಗರ:
ಸುಧೀರ್ಘ ಅವಧಿಗೆ ಸಚಿವರಾಗಿದ್ದರೂ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಹೀಗೆ ಆದರೆ ತಮ್ಮನ್ನು ಆಯ್ಕೆ ಮಾಡಿದ ಜನರಿಗೆ ತಾವುಗಳು ನೀಡುವ ಉತ್ತರವಾದರು ಏನು ಎಂದು ಎನ್ ಸಿ ಪಿ ಮುಖಂಡ ಹಾಗು ಮಾಜಿ ಕೇಂದ್ರ ಸಚಿವರೂ ಆಗಿರುವ ಶರದ್ ಪವಾರ್ ತಮ್ಮ ಮಾಜಿ ಸಹೋದ್ಯೋಗಿಗೆ ಪ್ರಶ್ನಿಸಿದ್ದಾರೆ.
ತಾವು ಸಚಿರಾಗಿದ್ದು ಏನೂ ಕೆಲಸಗಳಾಗಿಲ್ಲಾ ಆ ಕಾರಣದಿಂದ ತಾವು ತಮ್ಮ ಕೈಗಳಿಗೆ ಬಳೆ ತೊಟ್ಟಿಕೊಳ್ಳಿ ಎಂದು ಎನ್ ಸಿಪಿಯ ಮಾಜಿ ಮುಖಂಡ ಬಾಬನ್ರಾವ್ ಪಚ್ಪ್ಯೂಟ್ ವಿರುದ್ಧ ಶರದ್ ಪವಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಚ್ಪ್ಯೂಟ್ 2014ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು . ಈಗ ಅಹ್ಮದ್ ನಗರ ಜಿಲ್ಲೆಯ ಶ್ರಿಗೊಂಡಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ 21 ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಎನ್ ಸಿ ಪಿ ಅಭ್ಯರ್ಥಿ ಘಾಣ ಶ್ಯಾಮ್ ಶೆಲಾರ್ ಪರವಾಗಿ ಮತ ಯಾಚನೆ ವೇಳೆ ಪವಾರ್ ಅವರು ತಾವು ಅಧಿಕಾರದಲ್ಲಿದ್ದ ಅವಧಿಯಲ್ಲಿನ ಅಭಿವೃದ್ಧಿ ಕುರಿತು ಹೇಳುವಾಗ ಪವಾರ್ ಬಾಬುನ್ರಾವ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ . ಬಾಬುನ್ರಾವ್ ಅವರು ಇತ್ತೀಚೆಗೆ ಚುನಾವಣಾ ಪ್ರಚಾರವೊಂದರಲ್ಲಿ ಕಾಂಗ್ರೆಸ್- ಎನ್ ಸಿಪಿ ಆಡಳಿತಾವಧಿಯ 13 ವರ್ಷಗಳ ಕಾಲ ಸಚಿವನಾಗಿದ್ದರೂ ಸಹಿ ಮಾಡುವ ಅಧಿಕಾರ ಹೊರತುಪಡಿಸಿ ಬೇರೆ ಯಾವುದೇ ಸ್ವಾತಂತ್ರ್ಯ ವಿರಲಿಲ್ಲ ಎಂದು ಇತ್ತೀಚಿಗೆ ಹೇಳಿಕೆ ನೀಡಿದ್ದಾರೆ.
ಸಹಿ ಮಾಡುವ ಹಕ್ಕು ಮಾತ್ರ, ಬೇರೆ ಏನನ್ನೂ ಮಾಡಲಿಲ್ಲ ಎನ್ನುವವರಿಗೆ ಏನಂತಾ ಕರೆಯಬೇಕು? ಸಚಿವರಾಗಿದ್ದರೂ ಏನನ್ನು ಮಾಡದಿದ್ದರೆ ಹೋಗಿ ಕೈಗಳಿಗೆ ಬಳೆ ತೊಟ್ಟಿಕೊಳ್ಳಿ ಎಂದು ಪವಾರ್ ಕಿಡಿಕಾರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
