ಮೋದಿ ಸರ್ಕಾರವನ್ನು ಟೀಕಿಸಲು ಜನ ಭಯ ಪಡುತ್ತಿದ್ದಾರೆ : ರಾಹುಲ್ ಬಜಾಜ್

ಮುಂಬೈ:

     ಭಾರತದ ಸದ್ಯದ ಆರ್ಥಿಕತೆಯ ವಿರುದ್ಧ ಧ್ವನಿಗೂಡಿಸುವ ಧೈರ್ಯ ಯಾರು ಮಾಡುತ್ತಿಲ್ಲಾ ಏಕೆ ? ಇದಕ್ಕೆ ಎರಡು ಉತ್ತರವಿರಬಹುದು ಒಂದು ಆರ್ಥಿಕತೆ ಸರ್ಕಾರ ಹೇಳಿದಂತೆ ಸ್ಥಿರವಾಗಿರಬಹುದು ಆದರೆ ವಾಸ್ಥವದಲ್ಲಿ ಅದು ಇಲ್ಲ ಮತ್ತೊಂದು ಕೇಂದ್ರ ಸರ್ಕಾರಕ್ಕೆ ಹೆದರಿ ಭಯದಿಂದ ಜನ ಮೂಕರಾಗಿರಬಹುದು ಸದ್ಯ ನಮ್ಮೆಲ್ಲರ ಮುಂದಿರುವ ಸಾಕ್ಷಿಗಳಿಂದ ನೋಡಿದರೆ ನನಗೆ ಎರಡನೆಯದ್ದೇ ಸರಿ ಎನ್ನಿಸುತ್ತಿದೆ ಎಂದು  ಕೈಗಾರಿಕೋದ್ಯಮಿ ಮತ್ತು ಬಜಾಜ್ ಸಮೂಹದ ಅಧ್ಯಕ್ಷ ರಾಹುಲ್ ಬಜಾಜ್ ತಿಳಿಸಿದರು.

     ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ವಾಕ್ ಸ್ವಾತಂತ್ರ್ಯವಿತ್ತು ಎಲ್ಲರನ್ನೂ ಟೀಕಿಸಬಹುದಾಗಿತ್ತು. ಆದರೆ ಈಗ ಮೋದಿ ಸರ್ಕಾರವನ್ನು ಟೀಕಿಸಲು ಆಗದ ವಾತಾವರಣ ನಿರ್ಮಾಣವಾಗಿದೆ.ಒಂದೊಮ್ಮೆ ನಿಂದಿಸಿದ್ದಾದರೆ ನೀವು ನಮ್ಮನ್ನು ಪ್ರಶಂಸಿಸುತ್ತೀರಿ ಎನ್ನುವ ಯಾವ ಭರವಸೆ ಇಲ್ಲ. ನನ್ನ ತಪ್ಪು ಕಲ್ಪನೆ ಇದಾಗಲಿಕ್ಕೂ ಸಾಕು ಆದರೆ ಉದ್ಯಮ ವಲಯದ ಬಹುತೇಕರು ಹೀಗೆಂದು ಭಾವಿಸಿದ್ದಾರೆ ಎಂದು ಬಜಾಜ್ ಹೇಳಿದ್ದಾರೆ.

     ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಲಂ ನಿರ್ಲಾ, ಮತ್ತು ಭಾರ್ತಿ ಎಂಟರ್‌ಪ್ರೈಸಸ್ ಅಧ್ಯಕ್ಷ ಸುನಿಲ್ ಭಾರತಿ ಮಿತ್ತಲ್ ಸೇರಿದಂತೆ ಹಲವಾರು ಕೈಗಾರಿಕೋದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
     ನಾಥುರಾಮ್ ಗೋಡ್ಸೆ ಕುರಿತು ಲೋಕಸಭೆಯಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿಕೆಯನ್ನು ಉಲ್ಲೇಖಿಸಿದ ಬಜಾಜ್ ಕ್ಷಮಿಸಲು ಸಾಧ್ಯವಿಲ್ಲದ ಹೇಳಿಕೆ ನೀಡಿದ್ದರೂ ಅವರನ್ನು ರಕ್ಷಣಾ ಸಮಿತಿಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಹೇಳಿದರು.
    ವಿವಾದಾತ್ಮಕ ಹೇಳಿಕೆಗಳಿಗಾಗಿ ಠಾಕೂರ್ ಶುಕ್ರವಾರ ಲೋಕಸಭೆಯಲ್ಲಿ ಕ್ಷಮೆಯಾಚಿಸಿದ್ದಾರೆ, ಅವರು “ನಾಥುರಾಮ್ ಗೋಡ್ಸೆಯನ್ನು” ದೇಶಭಕ್ತ “ಎಂದು ಕರೆಯಲಿಲ್ಲ” ಎಂದು ಹೇಳಿದರು. ತನ್ನ ಹೇಳಿಕೆಯನ್ನು “ವಿರೂಪಗೊಳಿಸಲಾಗಿದೆ” ಎಂದು ಆಕೆ ಹೇಳಿದ್ದು ತನ್ನ ಹೇಳಿಕೆಗಳಿಂದ ಯಾರ ಭಾವನೆಗಳನ್ನಾದರೂ ನೋಯಿಸಿದ್ದರೆ ಕ್ಷಮೆಯಾಚಿಸುವುದಾಗಿ ಹೇಳಿದ್ದರು.ಇನ್ನು ದೇಶದಲ್ಲಿ ಗುಂಪುಹತ್ಯೆಗಳು ಹೆಚ್ಚುತ್ತಿದೆ ಎಂದು ಹೇಳಿದ ಉದ್ಯಮಿ  “ನಾವು ಕೆಲವು ವಿಷಯಗಳನ್ನು ಹೇಳಲು ಬಯಸುವುದಿಲ್ಲ ಆದರೆ ಇಲ್ಲಿಯವರೆಗೆ ಯಾರೂ ಶಿಕ್ಷೆಗೊಳಗಾಗಲಿಲ್ಲ ಎನ್ನುವುದನ್ನು ನಾನು ಗಮನಿಸಿದ್ದೇನೆ” ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ