ನವದೆಹಲಿ
‘ಫನಿ’ ಚಂಡಮಾರುತ ಒಡಿಶಾದ ಕರಾವಳಿಗೆ ಸಮೀಪ ಬಂದಿದ್ದು, ರಾಜ್ಯದಾದ್ಯಂತ ‘ಎಲ್ಲೋ ಅಲರ್ಟ್’ ಘೋಷಿಸಲಾಗಿದೆ. ಅಲ್ಲಿನ ಶಾಲಾ ಕಾಲೇಜುಗಳಿಗೆ ಗುರುವಾರದಿಂದ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ನಡುವೆ ಭಾರಿ ಮಳೆ, ಬಿರುಗಾಳಿಯ ಭೀತಿಗೆ ಒಳಗಾಗಿರುವ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಚುನಾವಣಾ ಆಯೋಗವು ಚುನಾವಣಾ ನೀತಿ ಸಂಹಿತೆಯನ್ನು ಹಿಂದಕ್ಕೆ ಪಡೆದು ಕೊಂಡಿದೆ . ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ನೀತಿ ಸಂಹಿತೆಯನ್ನು ತೆಗೆದುಹಾಕಲಾಗಿದೆ.
ಪುರಿ, ಜಗತ್ ಸಿಂಗಪುರ್, ಕೇಂದ್ರಪರ, ಭದ್ರಾಕ್, ಬಾಲಸೋರ್, ಮಯೂರ್ ಭಂಜ್, ಗಜಪತಿ, ಗಂಜಂ, ಖುರ್ದಾ, ಕಟಕ್ ಮತ್ತು ಜಾಜ್ಪುರಗಳಲ್ಲಿ ಪರಿಹಾರ, ರಕ್ಷಣೆ ಕಾರ್ಯಗಳನ್ನು ನಡೆಸಲು ಚುನಾವಣಾ ನೀತಿ ಸಂಹಿತೆ ಹಿಂಪಡೆಯಲಾಗಿದೆ.