ಪಾಟ್ನ:
ಕಳೆದ 3 ದಿನಗಳಿಂದ ಮನೆಯಲ್ಲಿಯೇ ಸಿಕ್ಕಿಹಾಕಿಕೊಂಡಿದ್ದ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರ ಕುಟುಂಬವನ್ನು ರಕ್ಷಿಸಲಾಗಿದೆ.
ಕಳೆದ ಎರಡು ದಶಕಗಳಲ್ಲಿಯೇ ಸುರಿಯದಷ್ಟು ಭಾರೀ ಮಳೆ ಬಿಹಾರದಲ್ಲಿ ಕಳೆದ ಮೂರು ದಿನಗಳಿಂದ ಬಂದ ಕಾರಣ ರಸ್ತೆ, ಆಸ್ಪತ್ರೆ, ಮನೆ, ಶಾಲೆಗಳೆಲ್ಲಾ ಸಂಪೂರ್ಣ ಜಲಾವೃತವಾಗಿದ್ದವು. ಬಿಹಾರ ರಾಜಧಾನಿ ಪಾಟ್ನ ಕೂಡಾ ತೇಲುವ ನಗರದಂತಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.
#WATCH: Bihar Deputy Chief Minister Sushil Modi who was stranded at his residence in Patna, rescued by National and State Disaster Response Forces personnel. #BiharFlood pic.twitter.com/WwdbAcTWy6
— ANI (@ANI) September 30, 2019
ಪಟನಾದ ರಾಜೇಂದ್ರ ನಗರ ಬಡಾವಣೆಯಲ್ಲಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರ ಮನೆ ಇದೆ. ಮಳೆಯಿಂದಾಗಿ ಇವರ ಮನೆ ಕೂಡ ಜಲಾವೃತಗೊಂಡಿತ್ತು. ನೀರು ಅಪಾಯ ಮಟ್ಟ ತಲುಪುತ್ತಿದ್ದರೂ ಇವರು ಯಾರೂ ಮನೆಯಿಂದ ಹೊರಬಂದಿರಲಿಲ್ಲ. 3 ದಿನಗಳ ಬಳಿಕ ನೀರು ಮತ್ತಷ್ಟು ಹೆಚ್ಚಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಅರ್ಎಫ್) ಸಿಬ್ಬಂದಿ ಇವರ ಮನೆಗೆ ಹೋಗಿ, ಸುಶೀಲ್ ಮೋದಿ ಸಮೇತ ಅವರ ಕುಟುಂಬದವರನ್ನು ರಕ್ಷಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ