ನವದೆಹಲಿ : 

ಇತ್ತೀಚೆಗಷ್ಟೇ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಹನುಮಂತನ ಜಾತಿ ಯಾವುದು ಎಂಬ ಬಗ್ಗೆ ತೀವ್ರ ಚರ್ಚೆ ಆಗುತ್ತಿರುವ ಬೆನ್ನಲೇ ಹಿಂದೂ ಧಾರ್ಮಿಕ ಪರಿಷತ್ ಒಂದು ಎಚ್ಚರಿಕೆ ನೀಡಿದ್ದು ಹನುಮಂತನ ಜಾತಿ, ಧರ್ಮದ ವಿಚಾರವಾಗಿ ನಿಮಗಿರುವಂತಹ ನೈತಿಕತೆ ಏನು ಎಂದು ಪ್ರಶ್ನಿಸಿದೆ , ಹನುಮನ ಬಗ್ಗೆ ಮಾತ ನಾಡುವವರು ತಮ್ಮ “ಮಾನಸಿಕ ಸ್ಥಿಮಿತ” ಕಳೆದುಕೊಂಡಿದ್ದಾರೆ ಎಂದು ಹಿಂದೂ ಸನ್ಯಾಸಿಗಳ ಧಾರ್ಮಿಕ ಪರಿಷತ್ – ಅಖಾಡ ಪರಿಷದ್ ಟೀಕಿಸಿದೆ.
ಹಿಂದೂ ದೇವರಾದ ಹನುಮಂತನ ಕುರಿತಂತೆ ರಾಜಕಾರಣಿಗಳು ಹೇಳಿಕೆ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಅಖಾಡ ಪರಿಷದ್ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಹೇಳಿದರು.”ಹನುಮಂತನ ಜಾತಿ, ಧರ್ಮದ ಕುರಿತಂತೆ ಅನಗತ್ಯವಾದ ಹೇಳಿಕೆಗಳನ್ನು ನೀಡುತ್ತಿರುವ ರಾಜಕಾರಣಿಗಳು ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ, ಅವರು ತಮ್ಮ ಮಿದುಳನ್ನು ಪರೀಕ್ಷಿಸಿಕೊಳ್ಳಬೇಕಿದೆ”ನರೇಂದ್ರ ಗಿರಿ ಪಿಟಿಐಗೆ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








