ಇಂದಿನಿಂದ ವಿಶ್ವವಿಖ್ಯಾತ ಪೂರಿ ಜಗನ್ನಾಥ ರಥಯಾತ್ರೆ ಪ್ರಾರಂಭ

ನವದೆಹಲಿ:

        ಸುಪ್ರೀಂಕೋರ್ಟ್ ತನ್ನ ನಿಲುವು ಬದಲಿಸಿಕೊಂಡು ಷರತ್ತುಬದ್ಧ ಒಪ್ಪಿಗೆ ನೀಡುತ್ತಿದ್ದಂತೆಯೇ ವಿಶ್ವವಿಖ್ಯಾತ ಪೂರಿ ಜಗನ್ನಾಥ ರಥಯಾತ್ರೆಗೆ ಮಂಗಳವಾರ ಚಾಲನೆ ದೊರಕಿದೆ. ಈ ರಥಯಾತ್ರೆ ಒಂದು ವಾರಗಳ ಕಾಲ ನಡೆಯಲಿದ್ದು, ರಥಯಾತ್ರೆಗೆ ನಿನ್ನೆಯಷ್ಟೇ ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ನೀಡಿತ್ತು. 

     ಇಂದು ಚಾಲನೆ ದೊರೆತಿರುವ ಈ ರಥಯಾತ್ರೆಯಲ್ಲಿ ಕೇವಲ ದೇವಸ್ಥಾನದ ಸಿಬ್ಬಂದಿ ಮತ್ತು ಪುರೋಹಿತರು ಮಾತ್ರ ಭಾಗವಿಸಿದ್ದು, ಪೂಜಾ ಕಾರ್ಯಕ್ರಮಗಳು ಆರಂಭವಾಗುವುದಕ್ಕೂ ಮುಂಚೆಯೇ ದೇವಸ್ಥಾನದ ಸಂಕೀರ್ಣವನ್ನು ಸ್ಯಾನಿಟೈಸ್ ಮಾಡಲಾಗಿದೆ. 
         
    ಇಂದು ಬೆಳಿಗ್ಗೆಯಿಂದಲೇ ಸಾಂಪ್ರದಾಯಿಕ ಪೂಜೆಗಳು ಆರಂಭವಾಗಿದ್ದು, ದೇವಸ್ಥಾನವನ್ನು ವರ್ಣರಂಜಿತವಾಗಿ ಸಜ್ಜುಗೊಳಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಪುರೋಹಿತರು ಸಾಂಪ್ರದಾಯಿಕ ಸಂಗೀತ ನುಡಿಸುತ್ತಿದ್ದು, ತಾಳಮದ್ದಳೆಗಳ ಶಬ್ಧಕ್ಕೆ ನೃತ್ಯ ಮಾಡುತ್ತಾ ಬಾಲಭದ್ರ ಪ್ರತಿಮೆಯನ್ನು ರಥದಲ್ಲಿ ತಂದು ಪ್ರತಿಷ್ಟಾಪಿಸಿದ್ದಾರೆ. 

     ಪ್ರತಿಮೆ ಸ್ಥಾಪನೆ ಬಳಿಕ ಪ್ರತೀಯೊಂದು ರಥದ ಬಳಿಯೂ ಸಾಕಷ್ಟು ಜನರು ಸುತ್ತುವರೆದಿರುವುದು ಕಂಡು ಬಂದಿದ್ದು, ರಥಯಾತ್ರೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಜಗನ್ನಾಥ ರಥಯಾತ್ರೆ ದೇಶದ ಪ್ರತೀಯೊಬ್ಬರಿಗೂ ಸಂತೋಷ, ಅದೃಷ್ಟ ಹಾಗೂ ಆರೋಗ್ಯವನ್ನು ನೀಡಲಿ ಎಂದು ತಿಳಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap