ಇಂದಿರಾ ಗಾಂಧಿಯವರ ಪುಣ್ಯತಿಥಿ : ಗಣ್ಯರ ಗೌರವ ನಮನ..!

ನವದೆಹಲಿ:

  ದೇಶ ಕಂಡ ಉಕ್ಕಿನ ಮಹಿಳೆ ಮತ್ತು ಧೀಮಂತ ಪ್ರಧಾನಿ  ದಿವಂಗತ ಇಂದಿರಾ ಗಾಂಧಿಯವರ 35ನೇ ಪುಣ್ಯತಿಥಿ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿರುವ ಶಕ್ತಿ ಸ್ಥಳ ಇಂದಿರಾ ಗಾಂಧಿ ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದರು.

  ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ತಮ್ಮ ಅಜ್ಜಿಯವರನ್ನು ನೆನೆದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಅವರ ತತ್ವಗಳು ತಮ್ಮ ಜೀವನಕ್ಕೆ ಮಾರ್ಗದರ್ಶನದ ಶಕ್ತಿಯಾಗಿದೆ. ನೀವು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ನನಗೆ ಪ್ರತಿ ಹೆಜ್ಜೆಯಲ್ಲಿಯೂ ಮಾರ್ಗದರ್ಶಕವಾಗಿ ನಿಲ್ಲುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.

   ಇಂದಿರಾ ಗಾಂಧಿಯವರು ದೇಶದ ಮೊದಲ ಮಹಿಳಾ ಪ್ರಧಾನಿ. ಅವರು 1966ರಿಂದ 1977ರವರೆಗೆ ಮತ್ತು 1980ರಿಂದ ಅವರ ಹತ್ಯೆ 1984ರವರೆಗೆ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದರು. ಅವರ ಅಂಗರಕ್ಷಕರೇ ಅವರು 1984ರ ಅಕ್ಟೋಬರ್ 31ರಂದು ಹತ್ಯೆಮಾಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap