ನವದೆಹಲಿ:
ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ರಿಯಾ ಚಕ್ರವರ್ತಿ ಡ್ರಗ್ ಕೇಸಿನಲ್ಲಿ ತಮ್ಮ ಹೆಸರನ್ನು ಮಾಧ್ಯಮಗಳು ಥಳಕು ಹಾಕುತ್ತಿವೆ ಎಂದು ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ವರದಿಗಳು ಸುಳ್ಳಾಗಿದ್ದು ಇದಕ್ಕೆ ತಡೆಯೊಡ್ಡಬೇಕೆಂದು ದೆಹಲಿ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. ಇನ್ನು ನಟಿ ಮಾಡಿಕೊಂಡಿರುವ ಮನವಿ ಬಗ್ಗೆ ದೆಹಲಿ ಹೈಕೋರ್ಟ್ ಗುರುವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
ನಟಿ ರಾಕುಲ್ ಪ್ರೀತ್ ಸಿಂಗ್ ಪರ ನ್ಯಾಯವಾದಿ ನವೀನ್ ಚಾವ್ಲಾ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ, ಪ್ರಸಾರ ಭಾರತಿ, ಭಾರತೀಯ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ನೊಟೀಸ್ ನೀಡಿದ್ದು, ಈ ಕುರಿತು ತಮ್ಮ ನಿಲುವು ಏನು ಎಂದು ಕೇಳಿದ್ದಾರೆ.