ನವದೆಹಲಿ:
ಈಗ ಬಂದಿರುವಂತಹ ಚುನಾವಣಾ ಫಲಿತಾಂಶ ಮೋದಿ ಸರ್ಕಾರಕ್ಕೆ ಜನತೆ ಕೊಟ್ಟ ಎಚ್ಚರಿಕೆ ಗಂಟೆಯಾಗಿದ್ದು, ಇನ್ನು ಉಳಿದಿರುವಂತಹ ಸಮಯದಲ್ಲಿ ಮೋದಿ ಸರ್ಕಾರ ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದರೆ ಒಳಿತು ಇಲ್ಲವಾದರೆ ಮುಂದೆ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಇತ್ತೀಚೆಗೆ ಪ್ರಕಟವಾದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಪಕ್ಷ ತನ್ನ ಹಿಡಿತದಲ್ಲಿದ್ದ ಮೂರು ರಾಜ್ಯಗಳನ್ನು ಕಳೆದುಕೊಂಡಿದ್ದು, ಮಿಜೋರಾಂ ಮತ್ತು ತೆಲಂಗಾಣದಲ್ಲಿ ಸ್ಥಳೀಯ ಪಕ್ಷಗಳಾದ ಎಂಎನ್ಎಫ್ ಮತ್ತು ಟಿಆರ್ ಎಸ್ ಅಧಿಕಾರದ ಗದ್ದುಗೆ ಏರಿವೆ. ಆ ಮೂಲಕ ಬಿಜೆಪಿಯನ್ನು ಜನ ತಿರಸ್ಕರಿಸಿದ್ದು, ಇದರ ಬೆನ್ನಲ್ಲೇ ಸಾಮಾಜಿ ಹೋರಾಟಗಾರ ಅಣ್ಣಾ ಹಜಾರೆ ಕೂಡ ಚುನಾವಣಾ ಫಲಿತಾಂಶದ ಸಂಬಂಧ ಪ್ರತಿಕ್ರಿಯೆ ನೀಡಿ ರಾಮ ಮಂದಿರದಲ್ಲಿ ಅಲ್ಲ ಬದಲಾಗಿ ಬಡವರ ಮನದಲ್ಲಿ ಇರುತ್ತಾನೆ ಬಡವರ ಉದ್ದಾರ ಮಾಡಿ ರಾಮ ಸಂತೃಪ್ತನಾಗುತ್ತಾನೆ ಎಂದು ತಿಳಿಸಿದ್ದಾರೆ .








