ಶಾರ್ಜಾ:
ಬ್ಯಾಟಿಂಗ್‍ನಲ್ಲಿ ಅಬ್ಬರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್‍ನಲ್ಲೂ ಮಿಂಚಿನ ದಾಳಿ ಸಂಘಟಿಸಿತು. ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 112 ರನ್‍ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಆರ್‍ಸಿಬಿ 82 ರನ್ ಗೆಲುವು ದಾಖಲಿಸಿತು.
195 ರನ್ ಟಾರ್ಗೆಟ್ ಪೆಡದ ಕೋಲ್ಕತಾ ನೈಟ್ ರೈಡರ್ಸ್‍ಗೆ ತಂಡದಲ್ಲಿ ಮಾಡಿದ ಬದಲಾವಣೆ ಕೈಗೂಡಲಿಲ್ಲ. ಆರಂಭಿಕ ಸುನಿಲ್ ನರೈನ್ ಬದಲು ಟಾಮ್ ಬ್ಯಾಂಟನ್ ತಂಡ ಸೇರಿಕೊಂಡರೂ ಉತ್ತಮ ಆರಂಭ ಸಿಗಲಿಲ್ಲ. ಟಾಮ್ ಬ್ಯಾಂಟನ್ 8 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಶುಭ್‍ಮನ್ ಗಿಲ್ ಹೋರಾಟ ಮುಂದುವರಿಸಿದರು.
ನಿತೀಶ್ ರಾಣಾ ಕೇವಲ 9 ರನ್ ಸಿಡಿಸಿ ಔಟಾದರೆ, ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸಿದ ದಿನೇಶ್ ಕಾರ್ತಿಕ್ ಕೇವಲ 1 ರನ್ ಸಿಡಿಸಿ ಔಟಾದರು. 62 ರನ್‍ಗಳಿಸುವಷ್ಟರಲ್ಲೇ ಕೆಕೆಆರ್ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಇತ್ತ ಇಯಾನ್ ಮಾರ್ಗನ್ 8 ರನ್ ಸಿಡಿಸಿ ನಿರ್ಗಮಿಸಿದರು.
ಕೆಕೆಆರ್ ತಂಡದ ಆತಂಕ ಹೆಚ್ಚಾಯಿತು. ಆಯಂಡ್ರೆ ರಸೆಲ್ ಹಾಗೂ ರಾಹುಲ್ ತ್ರಿಪಾಠಿ ಮೇಲೆ ತಂಡವನ್ನು ದಡ ಸೇರಿಸುವ ಜವಾಬ್ದಾರಿ ಬಿದ್ದಿತು. ರೆಸೆಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಲು ಆರಂಭಿಸಿದರು. ಆದರೆ ರಸೆಲ್ ಆಟ 16 ರನ್‍ಗೆ ಅಂತ್ಯವಾಯಿತು. ರಾಹುಲ್ ತ್ರಿಪಾಠಿ 16 ರನ್ ಸಿಡಿಸಿ ಔಟಾದರು.
ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ ಹಾಗೂ ಪ್ರಸಿದ್ಧ ಕೃಷ್ಣಗೆ ತಂಡವನ್ನು ಗೆಲುವಿನ ದಡ ಸೇರಿಸುವುದು ಅಸಾಧ್ಯವಾಯಿತು. ಕೆಕೆಆರ್ 9 ವಿಕೆಟ್ ನಷ್ಟಕ್ಕೆ 112ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಆರ್‍ಸಿಬಿ 82 ರನ್ ಗೆಲುವು ದಾಖಲಿಸಿತು. ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.
ಕಳೆದ ಎರಡು ಪಂದ್ಯಗಳಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್‍ರೌಂಡರ್ ಕ್ರಿಸ್ ಮೋರಿಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ. ಬಲಗೈ ವೇಗಿ ಆರ್‍ಸಿಬಿ ಕೂಡಿಕೊಂಡಿದ್ದರಿಂದ ಬೌಲಿಂಗ್ ವಿಭಾಗದ ಬಲ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಸೋಮವಾರ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‍ನ 28ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸಂಘಟಿತ ಪ್ರದರ್ಶನದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 82 ರನ್‍ಗಳಿಂದ ಪರಾಭವಗೊಳಿಸಿತು. ಆಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು.
ಶುಭಮನ್ ಗಿಲ್ ಬಿಟ್ಟರೆ ಇನ್ನುಳಿದ ಯಾವೊಬ್ಬ ಬ್ಯಾಟ್ಸ್‍ಮನ್ ಆರ್‍ಸಿಬಿ ಬೌಲರ್‍ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಸಾಧ್ಯವಾಗಲಿಲ್ಲ. ಅಂತಿಮವಾಗಿ ಕೆಕೆಆರ್ ನಿಗದಿತ 20 ಓವರ್‍ಗಳಿಗೆ 9 ವಿಕೆಟ್‍ಗಳನ್ನು ಕಳೆದುಕೊಂಡು 112 ರನ್‍ಗಳಿಗೆ ಸೀಮಿತವಾಯಿತು. ಈ ಪಂದ್ಯದಲ್ಲೂ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಕ್ರಿಸ್ ಮೋರಿಸ್ ಎರಡು ವಿಕೆಟ್‍ಗಳನ್ನು ಕಬಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
