ರಿಸರ್ವ್ ಬ್ಯಾಂಕ್ ನಿಂದ ರೆಪೊ ದರ ಇಳಿಕೆ…!

ನವದೆಹಲಿ:

     ಸದ್ಯ ದೇಶದಲ್ಲಿ ನಿಧಾನವಾಗಿ ಹರಡುತ್ತಿರುವ ಕೊರೋನಾವೈರಸ್ ತಡೆಗಟ್ಟುವಿಕೆಗಾಗಿ ಇಡೀ ದೇಶ ಲಾಕ್ ಡೌನ್ ಆಗಿದ್ದು, ಯಾವುದೇ ಆದಾಯವಿಲ್ಲದೇ ಸಾಲದ ಕಂತು ಹೇಗೆ ಕಟ್ಟುವುದು ಹೇಗೆ ಎಂದು ಚಿಂತೆಯಲಿದ್ದ ಜನರಿಗೆ ರಿಸರ್ವ ಬ್ಯಾಂಕ್ ರಲೀಫ್.

     ರಾಷ್ಟ್ರೀಕೃತ, ವಾಣಿಜ್ಯ, ಗ್ರಾಮೀಣ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿನ ಎಲ್ಲಾ ಸಾಲಗಳ  ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿದ್ದು, ಮೂರು ತಿಂಗಳ ಇಎಂಐಯನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಆರ್ ಬಿಐ ಗೌರ್ವನರ್ ಶಕ್ತಿಕಾಂತ ದಾಸ್  ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. 

      ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶಕ್ತಿಕಾಂತ ದಾಸ್, ವೈಯಕ್ತಿಕ, ಗೃಹ, ವಾಹನ ಸಾಲ, ಗೋಲ್ಡ್ ಲೋನ್, ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಸೇರಿದಂತೆ ಎಲ್ಲಾ  ಬ್ಯಾಂಕ್ ಗಳಲ್ಲಿ ಪಡೆದಿರುವ ಸಾಲದ ಇಎಂಐಯನ್ನು ಜೂನ್ ವರೆಗೂ ಮುಂದೂಡಿಕೆ ಮಾಡಲಾಗಿದೆ ಎಂದರು. ಕೊರೋನಾವೈರಸ್ ನಿಂದಾಗಿ ದೇಶದ ಅರ್ಥವ್ಯವಸ್ಥೆ ಮೇಲೆ ಪರಿಣಾಮ ಉಂಟಾಗಿದ್ದು, ಪ್ರಸ್ತುತದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

    ಅದೇ ರೀತಿಯಲ್ಲಿ ಆರ್ ಬಿಐ ಬ್ಯಾಂಕ್ ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ -ರೆಪೊದರವನ್ನು ಹಿಂದಿನ ದರದಲ್ಲಿ 75 ಅಂಶಗಳನ್ನು ಕಡಿತಗೊಳಿಸುವ ಮೂಲಕ ಶೇ. 4. 4 ಕ್ಕೆ ನಿಗದಿ ಪಡಿಸಿದೆ.ರಿವರ್ಸ್ ರೆಪೊ ದರ 90 ಅಂಶ ಕಡಿತಗೊಳಿಸಿದ್ದು, ಶೇ. 40 ರಷ್ಟು ನಿಗದಿಪಡಿಸಿರುವುದಾಗಿ ಶಕ್ತಿಕಾಂತ ದಾಸ್  ತಿಳಿಸಿದರು. ಕಳೆದ ತಿಂಗಳು ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link