ಮುಂಬೈ:
ಇಂದು ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಭಾರತದ ರೂಪಾಯಿ ಡಾಲರ್ ಎದಿರು 5 ಪೈಸೆ ಕುಸಿದು 71.17 ಕ್ಕೆ ತಲುಪಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರುಗಳಲ್ಲಿ ಮ್ಯೂಟ್ ಓಪನಿಂಗ್ ಕಂಡುಬಂದಿದೆ ಎಂದು ಷೇರು ಪೇಟೆ ಮೂಲಗಳು ತಿಳಿಸಿವೆ.
ವಿದೇಶಿ ವಿನಿಮಯ ಕೇಂದ್ರದಲ್ಲಿ, 71.12 ಕ್ಕೆ ಪ್ರಾರಂಭವಾದ ರೂಪಾಯಿ ಯುಎಸ್ ಡಾಲರ್ ಎದುರು 71.17 ಕ್ಕೆ ಇಳಿದಿದೆ, ಇದು ಹಿಂದಿನ ಮುಕ್ತಾಯಕ್ಕಿಂತ 5 ಪೈಸೆ ಕುಸಿತವನ್ನು ತೋರಿಸಿದೆ. ಅಮೆರಿಕದ ಡಾಲರ್ ಎದುರು ಶುಕ್ರವಾರ ಭಾರತೀಯ ರೂಪಾಯಿ ವಿನಿಮಯ 71.12 ಕ್ಕೆ ನಿಂತಿತ್ತು ಎನ್ನಲಾಗಿದೆ.
ಏತನ್ಮಧ್ಯೆ, ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 0.32 ಶೇಕಡಾ ಇಳಿದು 65.93 ಡಾಲರ್‌ಗೆ ತಲುಪಿದೆ. ಮೂರು ವಾರಗಳ ಲಾಭದ ನಂತರ, ಸೋಮವಾರ ತೈಲ ಬೆಲೆಗಳು ಸ್ಥಿರವಾಗಿ ಉಳಿದುಕೊಂಡಿವೆ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾಗಳು ದೀರ್ಘಕಾಲದ ಸುಂಕದ ಯುದ್ಧವನ್ನು ಕೊನೆಗೊಳಿಸಲು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಒಪ್ಪಂದಕ್ಕೆ ಹತ್ತಿರವಾಗಿದ್ದಕ್ಕಾಗಿ ಈ ಬೆಳವಣಿಗೆ ನಡೆಯುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ 338.86 ಕೋಟಿ ರೂ.ಗಳ ಷೇರುಗಳನ್ನು ಖರೀದಿಸಿದ್ದರಿಂದ ಬಂಡವಾಳ ಮಾರುಕಟ್ಟೆಗಳಲ್ಲಿ ನಿವ್ವಳ ಖರೀದಿದಾರರಾಗಿ ಉಳಿದಿದ್ದಾರೆ.