ಸರವಣ ಹೋಟೆಲ್ಸ್ ಮಾಲೀಕನಿಗೆ ಜೀವಾವಧಿಶಿಕ್ಷೆ…!!

ನವದೆಹಲಿ:
 
        18 ವರ್ಷದ ಹಿಂದೆ ನಡೆದಿದ್ದ ತಮ್ಮ ಸಂಸ್ಥೆಯ ಉದ್ಯೋಗಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಸರವಣ ಹೊಟೇಲ್ಸ್ ಮಾಲೀಕ ಪಿ. ರಾಜ್ ಗೋಪಾಲ್ ಗೆ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
      ಸಂಸ್ಥೆಯ ಉದ್ಯೋಗಿಯ ಪತ್ನಿಯನ್ನೇ ವಿವಾಹವಾಗುವ ಆಸೆಯಿಂದಾಗಿ ಸರವಣ ಹೊಟೇಲ್ಸ್ ನ ಮಾಲೀಕರು 2001ರ ಅಕ್ಟೋಬರ್ ನಲ್ಲಿ ಆತನನ್ನು ಕೊಲೆ ಮಾಡಿಸಿದ್ದ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
      ಜುಲೈ 7 ರೊಳಗೆ ಅಪರಾಧಿಗಳು ಶರಣಾಗಬೇಕೆಂದು ತಿಳಿಸಿದೆ, 2009ರ ಮಾರ್ಚ್ 20 ರಂದು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ರಾಜ್ ಗೋಪಾಲ್ ಮತ್ತಿತರರು ಸುಪ್ರಿಂಕೋರ್ಟ್ ಮೊರೆ ಹೋಗಿದ್ದರು.
    ಮೃತ ಉದ್ಯೋಗಿ ಶಾಂತ ಕುಮಾರ್ ಪತ್ನಿ ಜೀವನ್ ಜ್ಯೋತಿಯನ್ನು ವಿವಾಹವಾಗಲು ರಾಜ್ ಗೋಪಾಲ್ ಬಯಸಿದ್ದ,  ಹೀಗಾಗಿ ಆತನನ್ನು ಕೊಲೆ ಮಾಡಿದ್ದ ಎನ್ನಲಾಗಿದೆ, 2001 ರಲ್ಲಿ ಪೆರುಮಾಳ್ ಅರಣ್ಯ ಪ್ರದೇಶದಲ್ಲಿ ಉದ್ಯೋಗಿಯ ದೇಹ ಪತ್ತೆಯಾಗಿತ್ತು ಎಂದು ಪೊಲೀಸರು ಕೋರ್ಟ್ ಗೆ ತಿಳಿಸಿದ್ದಾರೆ. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link