ಕಾಂಗ್ರೆಸ್ ದೊಡ್ಡ ಶಾಕ್ ನೀಡಿದ ಸೋನಿಯಾ ಗಾಂಧಿ ಆಪ್ತ…!!!

0
54

ಕೇರಳ

        ಲೋಕಸಭಾ ಚುನಾವಣೆಗೆ ಇನ್ನೂ ಕೇವಲ ಒಂದು ತಿಂಗಳ ಬಾಕಿ ಉಳಿದಿರುವಾಗ ಕಾಂಗ್ರೆಸ್ ಗೆ ಅದರದ್ದೇ ಆದ ನಾಯಕ ಮತ್ತು ಆತನ ಸಹಚರರು ದೊಡ್ಡ ಮಟ್ಟದಲ್ಲಿ ಆಘಾತ ನೀಡಿದ್ದಾರೆ .

        ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ  ಟಾಮ್ ವಡಕ್ಕನ್ ಅವರು ರವಿಶಂಕರ್ ಪ್ರಸಾದ್ ಉಪಸ್ಥಿತಿಯಲ್ಲಿ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ . ಪಾಕಿಸ್ತಾನದ ಜೆ ಇ ಎಂ ಶಿಬಿರಗಳ ಮೇಲೆ ಭಾರತೀಯ ವಾಯುಪಡೆಯು ನಡೆಸಿದ ವೈಮಾನಿಕ ದಾಳಿಗಳ ಕುರಿತು ಕಾಂಗ್ರೆಸ್ ಪಕ್ಷದ ನಿಲುವಿನ ಬಗ್ಗೆ ಅಸಮಾಧಾನ ಹೊಂದಿದ್ದ ಅವರು ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ .

         “ಕಾಂಗ್ರೆಸ್ ಸಶಸ್ತ್ರ ಪಡೆಗಳ ಸಮಗ್ರತೆಯ ಬಗ್ಗೆ ಪ್ರಶ್ನಿಸಿದಾಗ ಆ ವಿಷಯವೂ ನನ್ನನ್ನು ತುಂಬಾ ಘಾಸಿಗೊಳಿಸಿದೆ. ವಿಷಯವು ಸಿದ್ಧಾಂತದಲ್ಲ, ಇದು ದೇಶಭಕ್ತಿಯ ವಿಷಯ ಒಂದು ರಾಜಕೀಯ ಪಕ್ಷ ದೇಶದ ವಿರುದ್ಧ ಸ್ಥಾನ ನಿಂತರೆ ,ಆ ಪಕ್ಷವನ್ನು ಬಿಡುವುದನ್ನು ಬಿಟ್ಟು ನನ್ನ ಬಳಿ ಆಯ್ಕೆ ಇಲ್ಲಾ “ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾಗಿರುವ ವಡಕ್ಕನ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.ವಡಕ್ಕನ್ ಅವರು ಯುಪಿಎ ಅಧ್ಯಕ್ಷೆ ಮತ್ತು ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿಕಟ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿ ಅವರಿಗೆ ಒಳ್ಳೆಯದಾಗಲಿ ಎಂದು ಮಾಧ್ಯಮಗಳಿಗೆ ತಿಳಿಸಿದರು.

         “ನಾನು 20 ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದ್ದೇನೆ. ಆದರೆ ಕುಟುಂಬ ರಾಜಕೀಯವು ಉತ್ತುಂಗಕ್ಕೇರಿತು. ಕಾಂಗ್ರೆಸ್ ನಲ್ಲಿ ಯೂಸ್ ಅಂಡ್ ತ್ರೋ ಪ್ರವೃತ್ತಿ ಆರಂಭವಾಗಿದೆ, “ಅವರು ಟೀಕಿಸಿದ್ದಾರೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here