ತೃಪ್ತಿ ದೇಸಾಯಿ ಅವರಿಂದ ಶಬರಿಮಲೆ ಯಾತ್ರೆ

0
36
ಪುಣೆ:
         ಸುಪ್ರೀಮ್ ಕೋರ್ಟ್ ಶಬರಿಮಲೆ ವಿಷಯದಲ್ಲಿ ನೀಡಿದ ತೀರ್ಪಿಗೆ ಹರ್ಷ ವ್ಯಕ್ತಪಡಿಸಿದ ತೃಪ್ತಿ ದೇಸಾಯಿ ಅವರು ಇದೀಗ ಮತ್ತೊಂದು ದಿಟ್ಟ ಹೆಜ್ಜೆ ಇಡಲು ನಿರ್ಧಾರ ಮಾಡಿದ್ದಾರೆ
        ಅದುವೆ ಶಬರಿಮಲೆ ಯಾತ್ರೆ ಅವರ ಜೊತೆಯಲ್ಲಿ 10 ರಿಂದ 50 ವಯೋಮಾನದ ಮಹಿಳೆಯರಿಗೆ ಶಬರಿ ಮಲೆ ಪ್ರವೇಶ  ಕಲ್ಪಿಸುವ ಮೂಲಕ  ಸುಪ್ರೀಂಕೋರ್ಟ್ ಸಮಾನತೆ ಸಾರಿದೆ ಎಂದು ಹರ್ಷ ವ್ಯಕ್ತ ಪಡಿಸಿದರಲ್ಲದೇ ಯಾವುದೇ ಪ್ರತಿಭಟನೆಯಾಗಲಿ ಅಥವಾ ಯಾವ ಶಕ್ತಿಯೇ ಆಗಲಿ ನಮ್ಮನ್ನು ತಡೆಯಲು ಆಗುವುದಿಲ್ಲ ಎಂದು ಹೇಳಿದ್ದಾರೆ ಮತ್ತು ಅತೀ ಶೀಘ್ರದಲ್ಲಿ ಯಾತ್ರೆಯ ದಿನಾಂಕವನ್ನು ಘೋಷಣೆ ಮಾಡುವವರಿದ್ದೇವೆ ಎಂದು ಹೇಳಿದ್ದಾರೆ . 
     ಅಯ್ಯಪ್ಪ ಭಕ್ತ ಸಮುದಾಯದಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿದ್ದರೂ  ದೇವಾಲಯಕ್ಕೆ ಭೇಟಿ ನೀಡುವುದಾಗಿ  ಭೂ ಮಾತಾ ಬ್ರಿಗೇಡ್ ಸ್ಥಾಪಕಿ ಹಾಗೂ ಸಾಮಾಜಿಕ  ಹೋರಾಟಗಾರ್ತಿ ತೃಪ್ತಿ ದೇಸಾಯಿ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here