ನವದೆಹಲಿ:
ಜಾಗತಿಕ ಮಟ್ಟದ ರೈಲ್ವೆ ಸಾರ್ಮಥ್ಯದಲ್ಲಿ ಭಾರತೀಯ ರೈಲ್ವೆ ಹೊಸ ಮೈಲಿಗಲ್ಲು ಮುಟ್ಟಿದೆ ಈ ಬಾರಿ ಕುಂಭ ಮೇಳಕ್ಕೂ ಮುನ್ನ ಹೊಸ ರೈಲ್ಲೊಂದನ್ನು ಲೋಕಾರ್ಪಣೆ ಮಾಡುವ ಇರಾದೆ ಹೊಂದಿದೆ ಮತ್ತು ಇದಕ್ಕಾಗಿ ಉಳಿದಿರುವುದು ಪ್ರಧಾನಿ ಕಚೇರಿಯಿಂದ ಅನುಮತಿಯಷ್ಟೆ.
ಇದೇ 14 ರಿಂದ ಪ್ರಯಾಗ್ ರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಮತ್ತು ಕುಂಭಮೇಳದಿಂದ ಗಣರಾಜ್ಯೋತ್ಸವ ಆಚರಣೆಗಾಗಿ ನವದೆಹಲಿಗೆ ಪ್ರವಾಸಿ ಭಾರತೀಯ ದಿವಸ್ ಪ್ರತಿನಿಧಿಗಳನ್ನು ಕರೆತರಲು ಈ ರೈಲನ್ನು ಬಳಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ.
ಈ ಟ್ರೈನ್ 18 ಗಂಟೆಗೆ 200 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿದ್ದು ಸಾಮಾನ್ಯವಾಗಿ 130 ಕಿ.ಮೀ ನಲ್ಲಿ ಚಾಲನೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ . ಪ್ರಧಾನಿ ನರೇಂದ್ರ ಮೋದಿ ಟ್ರೈನ್ 18ನ್ನು ಉದ್ಘಾಟನೆ ಮಾಡಲಿದ್ದು ನವದೆಹಲಿಯಿಂದ-ವಾರಾಣಸಿ ನಡುವೆ ಈ ರೈಲು ಸಂಚರಿಸಲಿದೆ ಎಂದು ಇಲಾಖೆ ತಿಳಿಸಿದೆಯಲ್ಲದೇ ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯೆಲ್ ಈ ರೈಲಿನ ತಪಾಸಣೆ ನಡೆಸಿ ಸಂತುಷ್ಟರಾಗಿದ್ದಾರೆ ಎಂದು ತಿಳಿಸಿದ್ದಾರೆ.