ಎನ್ಸಿಫಾಲಿಟಿಸ್ ಜ್ವರ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ನೀಡಿದ ಸುಪ್ರೀಂ

ಹೊಸದಿಲ್ಲಿ:

       ಎನ್ಸಿಫಾಲಿಟಿಸ್ ಜ್ವರಕ್ಕೆ ಬಲಿಯಾದ  ಸುಮಾರು 150 ಮಕ್ಕಳ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ, ಬಿಹಾರ ಮತ್ತು ಉತ್ತರಪ್ರದೇಶ ಸರ್ಕಾರಗಳಿಗೆ ನೊಟೀಸ್‌ ಜಾರಿ ಮಾಡಿದೆ.

       ಮಾರಕ ಜ್ವರದಿಂದಾದ ಮಕ್ಕಳ ಸಾವಿನ ಕುರಿತಾಗಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಪಿಐಎಲ್‌ಗೆ 7 ದಿನಗಳ ಒಳಗೆ ಸರ್ಕಾರಗಳು ಉತ್ತರ ನೀಡಬೇಕು ಎಂದು ಸುಪ್ರೀಂ ತಾಕೀತು ಮಾಡಿದೆ.

     ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಪಿಐಎಲ್‌ ನ ಸಮಬಂಧ ಬಿಹಾರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಲಾಗಿದೆ. ಕೇಂದ್ರ ಸರ್ಕಾರ ವೈದ್ಯಕೀಯ ಸೇವೆಗೆ ತಜ್ಞರನ್ನು ಮುಜಾಫ‌ರ್‌ಪುರಕ್ಕೆ ಕಳುಹಿಸಬೇಕು ಎಂದು ಮನವಿ ಮಾಡಲಾಗಿದೆ. 100 ಮೊಬೈಲ್‌ ಐಸಿಯು ಯುನಿಟ್‌ಗಳನ್ನು ಚಿಕಿತ್ಸೆಗಾಗಿ ಸಿದ್ಧಪಡಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

   ಸರ್ಕಾರಗಳು ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಮೃತ ಮಕ್ಕಳ ಕುಟುಂಬಕ್ಕೆಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

    ನ್ಯಾ.ಸಂಜೀವ್‌ ಖನ್ನಾ ಮತ್ತು ನ್ಯಾ.ಬಿ.ಆರ್‌.ಗವಾಯ್‌ ಅವರನ್ನೊಳಗೊಂಡ ದ್ವಿ ಸದಸ್ಯ ಪೀಠವು ಸರ್ಕಾರಗಳಿಗೆ ಇಂದಿನಿಂದ 10 ದಿನಗಳ ಒಳಗೆ ಪ್ರಕರಣದ ಪ್ರಗತಿ ಕುರಿತಾಗಿ ಸೂಕ್ತ ಉತ್ತರ ನಿಡಲು ಸೂಚಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link