ಮುಂಬಯಿ:
ನಟ ಸುಶಾಂತ್ ಸಿಂಗ್ ಸಾವು ಕೊಲೆ ಎಂಬ ಆರೋಪಗಳನ್ನು ಏಮ್ಸ್ ಆಸ್ಪತ್ರೆ ತಳ್ಳಿ ಹಾಕಿದೆ, ಅಂತಿಮವಾಗಿ ನಟನ ಸಾವಿನ ವರದಿ ಬಂದಿದ್ದು, ಮಹಾರಾಷ್ಟ್ರದ ಚಿತ್ರಣಕ್ಕೆ ಧಕ್ಕೆ ತರಲು ನಡೆದ ಪಿತೂರಿ ಇದಾಗಿತ್ತು ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಬರೆಯಲಾಗಿದೆ. ಪಿತೂರಿಯ ಭಾಗವಾಗಿದ್ದವರ ವಿರುದ್ಧ ಮಹಾರಾಷ್ಟ್ರ ಸರ್ಕಾರ ಮಾನಹಾನಿ ಕೇಸ್ ದಾಖಲಿಸಬೇಕೆಂದು ಸಾಮ್ನಾ ಹೇಳಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಕೊಲೆಯಲ್ಲ ಆತ್ಮಹತ್ಯೆ ಎಂದು ಏಮ್ಸ್ ಆಸ್ಪತ್ರೆ ವರದಿ ನೀಡಿದೆ. ಅಂಧ ಭಕ್ತರು ಈಗಲೂ ಕೂಡ ಏಮ್ಸ್ ಆಸ್ಪತ್ರೆ ವರದಿಯನ್ನು ತಿರಸ್ಕರಿಸಲಿದ್ದಾರೆಯೇ ಎಂದು ಸಾಮ್ನಾ ಪ್ರಶ್ನಿಸಿದೆ.ರಾಜಕಾರಣಿಗಳು ಮತ್ತು ನ್ಯೂಸ್ ಚಾನೆಲ್ ಗಳು ನಾಯಿಗಳ ರೀತಿ ಬೊಗಳುತ್ತಿದ್ದರು, ಮುಂಬಯಿ ಪೊಲೀಸರ ತನಿಖೆ ಬಗ್ಗೆಯೇ ಪ್ರಶ್ನೆ ಎತ್ತಿದ್ದರು ಹೀಗಾಗಿ ಅವರೆಲ್ಲರೂ ಮುಂಬಯಿ ಪೊಲೀಸರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ, ಯಾವುದೇ ಪಕ್ಷದ ಹೆಸರು ಹೇಳದೇ ಉತ್ತರ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಸುಮ್ಮನಿರುವ ರಾಜಕಾರಣಿಗಳ ಬಗ್ಗೆ ಕಿಡಿ ಕಾರಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
