ಮುಂಬೈ:
ಮಹಾರಾಷ್ಟ್ರ ಚುನಾವಣೆ ಮುಗಿದ ನಂತರ ಸರ್ಕಾರ ರಚನೆಗೆ ಮುಂದಾಗಿರುವ ಮೈತ್ರಿ ಪಕ್ಷದಲ್ಲಿ ಒಬ್ಬಬ್ಬರು ಒಂದೊಂದು ಹೇಳಿಕೆ ನೀಡುವ ಮೂಲಕ ದಿನಕ್ಕೊಂದು ಗೊಂದಲ ಮೂಡಿಸುವಲ್ಲಿ ನಿರತರಾಗಿದ್ದಾರೆ ಇದೇ ಸಮಯದಲ್ಲಿ ಶಿವಸೇನಾ ಪಕ್ಷವು ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆ ವಿಷಯದಲ್ಲಿ ಹೇಳಿಕೆ ನೀಡಿದ್ದು, ಶಿವಸೇನೆ ನಾಯಕರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಾರೆ ಎಂದಿದೆ.
ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಹೇಳುವ ಪ್ರಕಾರ ಸರ್ಕಾರ ರಚನೆ ಬಗ್ಗೆ ಎರಡೂ ಪಕ್ಷಗಳ ಮಧ್ಯೆ ಯಾವುದೇ ಮಾತುಕತೆಗಳು ನಡೆದಿಲ್ಲಆದರೆ ನಮ್ಮ ನಿಲುವಿಗೆ ನಾವು ಬದ್ಧರಾಗಿರುತ್ತೇವೆ ಶಿವಸೇನಾ ಪಕ್ಷದಿಂದಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಯಾಗುತ್ತಾರೆ ಎಂದು ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.ಸರ್ಕಾರ ರಚನೆಯಲ್ಲಿ ಬಿಜೆಪಿ ಮುಂದೆ ನಾವು ಯಾವುದೇ ದೊಡ್ಡ ಬೇಡಿಕೆಯನ್ನು ಮುಂದಿಟ್ಟಿಲ್ಲ, ಅವರ ಜೊತೆ ಮಾತುಕತೆಯೂ ನಡೆಸಿಲ್ಲ, ಅವರು ದೊಡ್ಡ ಮನುಷ್ಯರು. ಶಿವಸೇನೆ ತೀರ್ಮಾನಿಸಿದರೆ ಸ್ಥಿರ ಸರ್ಕಾರ ರಚಿಸಲು ಬೇಕಾದಷ್ಟು ಸದಸ್ಯರ ಬೆಂಬಲ ಸಿಗಲಿದ್ದು ಸರ್ಕಾರ ರಚಿಸಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
50:50 ಸೂತ್ರದ ಪ್ರಕಾರ ಸರ್ಕಾರ ರಚಿಸಲು ರಾಜ್ಯದ ಜನತೆ ತೀರ್ಪು ಕೊಟ್ಟಿದ್ದಾರೆ. ಮಹಾರಾಷ್ಟ್ರ ಜನತೆ ಮುಂದೆ ಆದ ತೀರ್ಮಾನವಿದು ಎಂದು ಕೂಡ ಹೇಳಿದರು.50:50 ಸೂತ್ರದಂತೆ ಖಾತೆಗಳ ಹಂಚಿಕೆ ಮಾಡಿ ಎರಡೂ ಪಕ್ಷಗಳಿಂದ ಎರಡೂವರೆ ವರ್ಷಗಳ ಕಾಲ ಒಬ್ಬೊಬ್ಬರು ಸಿಎಂ ಹುದ್ದೆ ವಹಿಸಲಿ ಎಂಬುದು ಶಿವಸೇನೆಯ ಬೇಡಿಕೆಯಾಗಿದೆ. ಆದರೆ ಬಿಜೆಪಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ದೇವೇಂದ್ರ ಫಡ್ನವಿಸ್ ಅವರೇ 5 ವರ್ಷಗಳ ಕಾಲ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ