ರಾಂಪುರ:
ಅಕ್ರಮ ಭೂಒತ್ತುವರಿ ಆರೋಪದಡಿಯಲ್ಲಿ ಸಮಾಜವಾದಿ ಪಕ್ಷದ ವಿವಾದಿತ ಸಂಸದ ಅಜಮ್ ಖಾನ್ ಅವರ ಐಷಾರಾಮಿ ರೆಸಾರ್ಟ್ ಅದ ಹಮ್ಸಾಫರ್ ಗಡಿ ಗೋಡೆಯನ್ನು ರಾಂಪುರ್ ಜಿಲ್ಲಾಡಳಿತ ಶುಕ್ರವಾರ ನೆಲಸಮ ಮಾಡಿದ್ದು ಉತ್ತರ ಪ್ರದೇಶದ ನೀರಾವರಿ ಇಲಾಖೆಯ ನಾಲೆಯ ಮೇಲೆ ನಿರ್ಮಿಸಲಾದ ಗೋಡೆಯನ್ನು ಎರಡು ಜೆಸಿಬಿಗಳು ಯಶಸ್ವಿಯಾಗಿವೆ . ಕೆಡವಲಾಗಿರುವ ತಡೆಗೋಡೆಯೂ ಸುಮಾರು 1,000 ಚದರ ಮೀಟರ್ ವರೆಗೆ ವಿಸ್ತರಿಸಿತ್ತು ಮತ್ತು ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗದಂತೆ ಸ್ಥಳದಲ್ಲಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿತ್ತು ಎಂದು ಜಿಲ್ಲಾಡಳಿತ ಹೇಳಿದೆ.
ಈ ರೆಸಾರ್ಟ್ ಅಜಂ ಖಾನ್ ಅವರ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ,ರಾಜ್ಯ ಸರ್ಕಾರದ ಒಡೆತನದ ಜಮೀನಿನಲ್ಲಿ ಐಷಾರಾಮಿ ರೆಸಾರ್ಟ್ ನ ಕಾಂಪೋಂಡ್ ನಿರ್ಮಿಸಲಾಗಿದೆ ಎಂದು ಆರೋಪಿಸಿ ಉತ್ತರ ಪ್ರದೇಶ ನೀರಾವರಿ ಇಲಾಖೆ ಅಜಮ್ ಖಾನ್ ಅವರಿಗೆ ನೋಟಿಸ್ ನೀಡಿತ್ತು.
ಜುಲೈ 29 ರಂದು, ರೈತರ ಮತ್ತು ಸರ್ಕಾರ ಭೂಮಿಯನ್ನು ಕಸಿದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜಮ್ ಖಾನ್ ವಿರುದ್ಧ ಸರಣಿ ಪ್ರಕರಣಗಳು ದಾಖಲಾಗಿವೆ.ವಿಶ್ವವಿದ್ಯಾನಿಲಯದ ಖಾತೆಗೆ ವಿದೇಶದಿಂದ ದೇಣಿಗೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದ ಬಗ್ಗೆ ಜಾರಿ ಇಲಾಖೆ ವಿಚಾರಣೆ ನಡೆಸುತ್ತಿದೆ.ರಾಂಪುರ್ ಪೊಲೀಸರಿಂದ ಖಾನ್ ವಿರುದ್ಧ ದಾಖಲಾಗಿರುವ ಪ್ರಕರಣಗಳ ಪಟ್ಟಿಯನ್ನು ಇಡಿ ಕೋರಿದೆ.
“ನಾವು ಸದ್ಯ ಕ್ರಯ ಪತ್ರಗಳನ್ನು ಪರಿಶೀಲನೆ ನಡೆಸಿ ಅದರ ನಿಜವಾದ ಮಾರಾಟಗಾರ/ಮಾಲೀಕನನ್ನು ಕಂಡುಹಿಡಿಯಲು ಅಧಿಕೃತ ದಾಖಲೆಗಳನ್ನು ಪರಿಶೀಲಿಸಬೇಕಾಗಿದೆ.ಇನ್ನು ಈ ಜಾಗಕ್ಕಾಗಿ ಯಾವ ಖಾತೆಗಳಿಂದ ಹಣ ಪಾವತಿಯಾಗಿದೆ ಎಂಬ ವಿಷಯದ ಬಗ್ಗೆಯೂ ಚರ್ಚೆ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ”.
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








