ಪಾಟ್ನಾ:
ಇಷ್ಟು ದಿನ ಎನ್ ಆರ್ ಸಿ ಹಾಗೂ ಸಿಎಎ ವಿಚಾರದಲ್ಲಿ ಮೌನವಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಅಸ್ಸಾಂ ದೃಷ್ಟಿಯಲ್ಲಿಟ್ಟುಕೊಂಡು ಎನ್ ಆರ್ ಸಿ ಜಾರಿಯಾಗಿದ್ದರೂ ಇಡೀ ದೇಶಕ್ಕಲ್ಲ ಎಂದಿದ್ದಾರೆ.ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ)ಯನ್ನು ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ನಿರಾಕರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಎನ್ ಆರ್ ಸಿ ದೇಶಾದ್ಯಂತ ವಿಸ್ತರಿಸುವ ಹಿಂದೆ ಯಾವುದೇ ತರ್ಕವಿಲ್ಲ ಎಂದು ಅನಿಸುತ್ತದೆ. ಸದನದಲ್ಲಿ ಎನ್ ಆರ್ ಸಿ ಹಾಗೂ ಸಿಎಎ ವಿಚಾರದಲ್ಲಿ ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ. ಚರ್ಚೆಯಲ್ಲಿ ಬರುವಂತಹ ಪ್ರತಿಕ್ರಿಯೆಯನ್ನು ಕೇಂದ್ರಸರ್ಕಾರಕ್ಕೆ ತಿಳಿಸಲಾಗುವುದು ಎಂದಿದ್ದಾರೆ.ಬಿಹಾರದಲ್ಲಿ ಎನ್ಆರ್ ಸಿ ಅಗತ್ಯವಿಲ್ಲ ಎಂದೆನಿಸುತ್ತದೇ ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ