ನವದೆಹಲಿ:
1992 ರಲ್ಲಿ ಬಾಬರಿ ಮಸೀದಿ ನೆಲಸಮವಾದಾಗಿನಿಂದ ಇಲ್ಲಿಯವರೆಗೂ ಇದ್ದ ದಶಕಗಳ ಅನಿಶ್ಚಿತತೆಗೆ ಸುಪ್ರೀಂಕೋರ್ಟ್ ನಾಳೆ ತೆರೆ ಎಳೆಯಲಿದೆ. ಇದಕ್ಕೂ ಮುನ್ನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಉತ್ತರ ಪ್ರದೇಶದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚಿಸಿದ್ದಾರೆ.
ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ಶನಿವಾರ ಬೆಳಿಗ್ಗೆ 10: 30 ಕ್ಕೆ ತೀರ್ಪು ನೀಡಲಿದ್ದು, ಈ ವಿವಾದ ಮತ್ತು ದಶಕಗಳಿಂದ ಇದ್ದ ಅನಿಶ್ಚಿತತೆ ಕೊನೆಗೊಳುವ ಸಮಯ ಬಂದಿದೆ ಎಂದು ತಿಳಿಸಿದ್ದಾರೆ. ರಂಜನ್ ಗೊಗೊಯ್ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ಅಕ್ಟೋಬರ್ 16 ರಂದು 40 ದಿನಗಳ ಮ್ಯಾರಥಾನ್ ವಿಚಾರಣೆಯ ನಂತರ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಮುಂಜಾನೆ ಅವರು ಉತ್ತರ ಪ್ರದೇಶದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಚರ್ಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ