ಟೆರೇಸ್ ನಿಂದ ಬಿದ್ದು ಕಿರುತೆರೆ ನಟಿ ಸಾವು

ಭುವನೇಶ್ವರ್: 

   ಕಿರುತೆರೆಯಲ್ಲಿ ಮಿಂಚಚುವ ತಾರೆಯರು ಎಲ್ಲರ ಮನೆಮಾತಾಗಿ ಎಸಿಪಿ ನಿಖಿತ ಎಂದೇ ಖ್ಯಾತರಾಗಿದ್ದ ಕಿರುತೆರೆ ನಟಿ ಲಕ್ಷ್ಮಿಪ್ರಿಯ ಬೆಹೆರಾ ಅವರು ಇತ್ತೀಚೆಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದ್ದು  ಈ ಪ್ರಕರಣ ಸಂಬಂಧ ಪೊಲೀಸರು ಆಕೆಯ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

   ಆಸ್ಪತ್ರೆಗೆ ನಿಖಿತಾರನನ್ನು ಕರೆದುಕೊಂಡು ಹೋದಾಗ ಅವರ ತಲೆಗೆ ಗಂಭೀರ ಗಾಯಗಳಾಗಿದ್ದ ನಿಖಿತಾ ಒಡಿಶಾದ ಕಟಕ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜನವರಿ 5ರಂದು ಅವರು ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದರು ಎನ್ನಲಾಗಿದೆ.

    ಪೊಲೀಸರು ಸಂಗ್ರಹಿಸಿರುವಂತಹ  ಪ್ರಾಥಮಿಕ ವರದಿಗಳ ಪ್ರಕಾರ ,ನಿಖಿತಾ ಅವರು ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ಟೆರೇಸ್ ನಿಂದ ಬಿದ್ದ ಕಾರಣ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದೆ ಎಂದು ವರದಿಯಾಗಿತ್ತು. ಆದ್ರೆ ತಲೆಗೆ ಬಲವಾಗಿ ಏಟು ಬಿದ್ದು ಆಕೆ ಮೃತಪಟ್ಟಿದ್ದಾಳೆ ಎಂದು ಆಕೆಯ ತಂದೆ, ತಾಯಿ ಹಾಗೂ ಪತಿ ಹೇಳಿದ್ದರು. ನಿಖಿತಾ ದೇಹದಲ್ಲಿ ಗಾಯಗಳಾಗಿರುವ ಕುರಿತು ವೈದ್ಯರ ವರದಿಯಲ್ಲೂ ಉಲ್ಲೇಖವಾಗಿತ್ತು ಆದ್ದರಿಂದ ಪತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap