ಜಮ್ಮು:
ಜಮ್ಮು- ಕಾಶ್ಮೀರದ ಪೊಂಚ್ ಸೆಕ್ಟರ್ ನ ಎಲ್ ಓ ಸಿಯಲ್ಲಿ ಪಾಕಿಸ್ತಾನ ಸೇನೆಯಿಂದ ಇಂದು ಭಾರೀ ಶೆಲ್ಲಿಂಗ್ ದಾಳಿ ನಡೆಸಲಾಗಿದ್ದು, ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕೋಟ್ ಪ್ರದೇಶದಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಮೊರ್ಟಾರ್ ಶೆಲ್ಲಿಂಗ್ ದಾಳಿ ನಡೆಸಲಾಗಿದ್ದು.ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯಿಂದ ಪ್ರತ್ಯುತ್ತರ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.ಪಾಕ್ ಶಲ್ ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ನಾಗರಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೆಲ್ಲಿಂಗ್ ದಾಳಿಯಾಗುತ್ತಿದ್ದಾಗ ಗ್ರಾಮಸ್ಥರು ಮನೆ ಹಾಗೂ ಬಂಕರ್ಸ್ ಕೆಳಗಡೆ ರಕ್ಷಣೆ ಪಡೆದಿದ್ದಾರೆ ಮತ್ತು ಹತ್ತಿರದ ಕೆಲ ಶಾಲೆಗಳ ಮಕ್ಕಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.ಮತ್ತು ಭಾರತೀಯ ಸೇನೆಯೂ ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ್ದು ಸುಮಾರು 20-30 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ