ಗೋವಾ : ತಡರಾತ್ರಿ ಬಿಜೆಪಿ ಸೇರಿದ ಇಬ್ಬರು ಶಾಸಕರು..

ಗೋವಾ:

      ಗೋವಾದ  ಆಡಳಿತಾರೂಢ ಮೈತ್ರಿ ಸರ್ಕಾರದ ಇಬ್ಬರು ಶಾಸಕರು ಬಿಜೆಪಿ ಸೇರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ .ಇದರಿಂದಾಗಿ ಗೋವಾದಲ್ಲಿ ಬಿಜೆಪಿ ಶಾಸಕರ ಸಂಖ್ಯೆ 12 ರಿಂದ 14ಕ್ಕೆ ಏರಿಕೆಯಾಗಿದೆ.

     ತಡರಾತ್ರಿ ನಡೆದ ದಿಢೀರ್ ಬೆಳವಣಿಗೆಯಂದರಲ್ಲಿ ಸರ್ಕಾರದ ಮೈತ್ರಿ ಪಕ್ಷವಾದ ಎಮ್‌ಜಿಪಿಯ  ಇಬ್ಬರು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಗೋವಾದ ಪ್ರವಾಸೋದ್ಯಮ ಸಚಿವ ಮನೋಹರ್ ಅಜಂಗಾವ್ಕರ್ ಉಪಖ್ಯಮಂತ್ರಿ ದೀಪಕ್ ಪಾವಸ್ಕರ್ ಬಿಜೆಪಿಗೆ ಸೇರಿದ ಶಾಸಕರಾಗಿದ್ದಾರೆ

     ಇದೀಗ ಗೋವಾದ ಬಿಜೆಪಿಯ ಶಾಸಕರ ಸಂಖ್ಯೆ 12 ರಿಂದ 14ಕ್ಕೆ ಏರಿಕೆಯಾಗಿದೆ ತಡರಾತ್ರಿ ಸುಮಾರು 1.45ರ ವೇಳೆ ಸ್ಪೀಕರ್ ಮೈಕೇಲ್ ಲೋಬೊ ಅವರನ್ನು ಭೇಟಿ ಮಾಡಿದ ಎಮ್‌ಜಿಪಿಯ ಈ ಇಬ್ಬರು ಶಾಸಕರು ಮೈತ್ರಿ ಪಕ್ಷವನ್ನು ಬಿಜೆಪಿಯೊಳಗೆ ವಿಲೀನಗೊಳಿಸ ಬೇಕೆಂಬ ಮನವಿ ಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಸುದಿನ್ ದಾವಲಿಕರ್ ಮಾತ್ರ ಪತ್ರಕ್ಕೆ ಸಹಿ ಇಲ್ಲ ಇವರಿಬ್ಬರ ಸೇರ್ಪಡೆಯನ್ನು ಖಚಿತಗೊಳಿಸಿದ ಲೋಬೋ, ಪತ್ರದಲ್ಲಿ ದಾವಲಿಕರ್ ಅವರ ಸಹಿ ಇಲ್ಲ ಎಂದು ತಿಳಿಸಿದ್ದಾರೆ 2012ರಲ್ಲಿ ಗೋವಾದಲ್ಲಿ ಎಮ್‌ಜಿಪಿ– ಬಿಜೆಪಿ ಜೊತೆ ಮೈತ್ರಿ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link