ತುರುವೇಕೆರೆ
ಪಟ್ಟಣ ಪಂಚಾಯ್ತಿ 14 ವಾರ್ಡ್‍ಗಳ ಚುನಾವಣೆ ನಡೆದು ಬಿಜೆಪಿ 6, ಜೆಡಿಎಸ್ 5, ಕಾಂಗ್ರೇಸ್ 2 ಹಾಗು ಪಕ್ಷೇತರ 1 ಸ್ಥಾನದಲ್ಲಿ ಗೆಲವು ಸಾಧಿದ್ದಾರೆ.
ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೇಸ್ ಹಾಗೂ ಪಕ್ಷೇತರರು ಸೇರಿ ಒಟ್ಟು 49 ಅಭ್ಯರ್ಥಿಗಳು ಸ್ಪರ್ದಿಸಿದ್ದರು. ಶುಕ್ರವಾರ ನೆಡೆದ ಪಲಿತಾಂಶದಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಇದೇ ಮೊದಲ ಬಾರಿಗೆ ಪಟ್ಟಣ
ಪಂಚಾಯ್ತಿ ಗದ್ದುಗೆ ಹಿಡಿಯುವ ಅಂತರದಲ್ಲಿದೆ.
1 ನೇ ವಾರ್ಡ್ ಎಚ್.ಸಿ.ಶೀಲ 389 (ಬಿಜೆಪಿ), ರಂಗಸ್ವಾಮಿ 296(ಜೆಡಿಎಸ್),
2 ನೇ ವಾರ್ಡ್ ಟಿ.ಜೆ.ಮೇಘನಾ 293(ಕಾಂಗ್ರೆಸ್), ರಿಹಾನಬೇಗಂ 242 (ಜೆಡಿಎಸ್).
3 ನೇ ವಾರ್ಡ್ ಕೆ.ಭಾಗ್ಯ 313 (ಬಿಜೆಪಿ), ಎಸ್.ಸುಮಲತ 294 (ಜೆಡಿಎಸ್).
4 ನೆ ವಾರ್ಡ್ ಎನ್.ನದೀಮ್‍ಅಹಮದ್ 364(ಜೆಡಿಎಸ್), ಜೆ.ಚಂದ್ರಶೇಖರ್ 273(ಬಿಜೆಪಿ),
5 ನೇ ವಾರ್ಡ್: ಕೆ.ರವಿ 310(ಬಿಜೆಪಿ), ಎಂ.ಎನ್.ಶರತ್‍ಕುಮಾರ್ 249(ಜೆಡಿಎಸ್).
6 ನೇ ವಾರ್ಡ್ ಟಿ.ಕೆ.ಚಿದಾನಂದ 224(ಬಿಜೆಪಿ), ರವೀಂದ್ರ 218 (ಜೆಡಿಎಸ್),
7 ನೇ ವಾರ್ಡ್ ಅಂಜನ್‍ಕುಮಾರ್ 375 (ಬಿಜೆಪಿ), ಶೌಕತ್ ಅಲಿ 180(ಕಾಂಗ್ರೆಸ್),
8 ನೇ ವಾರ್ಡ್: ಜಿ.ಎಂ.ಸ್ವಪ್ನಾ 228 (ಜೆಡಿಎಸ್). ಸುನಂದಮ್ಮ 204 (ಬಿಜೆಪಿ),
9 ನೇ ವಾರ್ಡ್- ಆರ್.ಮಧು 287 (ಜೆಡಿಎಸ್), ಕೆ.ಬಿ.ಶೋಭಾ 233 (ಬಿಜೆಪಿ).
10 ನೇ ವಾರ್ಡ್ ಟಿ.ಪಿ.ಮಹೇಶ್(ಯಜಮಾನ್) 310 (ಕಾಂಗ್ರೆಸ್), ಎಚ್.ಆರ್.ರಾಮೇಗೌಡ 305(ಬಿಜೆಪಿ),
11 ನೇ ವಾರ್ಡ್ ಜಯಮ್ಮ 357 (ಜೆಡಿಎಸ್), ಟಿ.ಎಂ.ಹೇಮಲತಾ 222(ಬಿಜೆಪಿ).
12 ನೇ ವಾರ್ಡ್ ಟಿ.ಕೆ.ಪ್ರಭಾಕರ್ 180 (ಪಕ್ಷೇತರ). ಟಿ.ಜಿ.ರವಿಕುಮಾರ್ 172 (ಬಿಜೆಪಿ),
13 ನೇ ವಾರ್ಡ್ ಸಿ.ಎಸ್.ಆಶಾರಾಣಿ 266 (ಬಿಜೆಪಿ), ಸಿ.ಆರ್.ಇಂದಿರಾ 124(ಪಕ್ಷೇತರ),
14 ನೇ ವಾರ್ಡ್ ಎನ್.ಆರ್.ಸುರೇಶ್ 278 (ಜೆಡಿಎಸ್) ಶಶಿಶೇಖರ್ 196 (ಕಾಂಗ್ರೆಸ್),
ಸ್ಥಾನ ಉಳಿಸಿಕೋಂಡ ಸದಸ್ಯರು: ಯಜಮಾನ್ ಮಹೇಶ್ 10 ನೇ ವಾರ್ಡ್‍ನಿಂದ ಹ್ಯಾಟ್ರಿಕ್ ಗೆಲುವು ಸಾದಿಸಿದ್ದು ಹಾಗೂ ನದೀಂ ಅಹಮದ್ 4 ನೇ ವಾರ್ಡ್ ಎರಡನೇ ಬಾರಿಯೂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ 12 ಹೊಸ ಸದಸ್ಯರು ಗೆಲುವು ಸಾದಿಸಿರುವುದು ವಿಶೇಷವೆನಿಸಿದ್ದು ಅದರಲ್ಲಿ ಇಬ್ಬರು ಸದಸ್ಯರು ಮಾತ್ರ ಮರು ಆಯ್ಕೆಯಾಗಿದ್ದಾರೆ.
ಕಡಿಮೆ ಅಂತರದಲ್ಲಿ ಗೆಲುವು: 6 ನೆ ವಾರ್ಡ್‍ನಲ್ಲಿ ಜೆಡಿಎಸ್ ನ ರವೀಂದ್ರ ವಿರುದ್ದ 6 ಮತಗಳ ಅಂತರದಲ್ಲಿ ಬಿಜೆಪಿ ಚಿದಾನಂದ್ ಗೆಲುವು ಸಾಧಿಸಿದ್ದರೆ, 10 ನೇ ವಾರ್ಡ್‍ನಲ್ಲಿ ಬಿಜೆಪಿ ಯ ಹೆಚ್.ಆರ್.ರಾಮೇಗೌಡ ವಿರುದ್ದ ಕಾಂಗ್ರೆಸ್ ನ ಟಿ.ಪಿ.ಮಹೇಶ್ 5 ಮತಗಳ ಅಂತರದಲ್ಲಿ ಗೆಲುವು ಹಾಗು 12 ನೇ ವಾರ್ಡ್‍ನಲ್ಲಿ ಬಿಜೆಪಿ ರವಿಕುಮಾರ್ ವಿರುದ್ದ ಪಕ್ಷೇತರ ಅಭ್ಯರ್ಥಿ ಟಿ.ಕೆ.ಪ್ರಭಾಕರ್ 8 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಬೆಳಿಗ್ಗೆ 8 ಕ್ಕೆ ಪ್ರಾರಂಭವಾದ ಮತಎಣಿಕೆ 9-30 ಕ್ಕೆ 14 ವಾರ್ಡ್‍ಗಳ ಮತಎಣಿಕೆ ಪೂರ್ಣಗೊಂಡು ಫಲಿತಾಂಶ ಹೊರಬಿದ್ದಿತು. ಗೆದ್ದಂತ ಅಭ್ಯರ್ಥಿಗಳನ್ನು ಅವರ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪೋಲೀಸ್ ಸೂಕ್ತ ಬಂದೋಬಸ್ತು ಏರ್ಪಡಿಸಿದ್ದರಿಂದ ಶಾಂತ ರೀತಿಯಿಂದ ಮತ ಎಣಿಕೆ ಕಾರ್ಯ ಪೂರ್ಣಗೊಂಡಿತು.