ಹರಿಯಾಣ
ಹರಿಯಾಣದ ಹಿಸಾರ್‌ನ ಹಿಸಾರ್-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ, ಮಿಲಿಟರಿ ಕ್ಯಾಂಪ್ ಸಮೀಪದ ಸಾಥ್ ರೋಡ್ ಖಾಸ್ ಎಂಬ ಹಳ್ಳಿಯ ಜೋಹಡ್ ದಡದಲ್ಲಿ ಗುರುವಾರ ಬೆಳಗ್ಗೆ ಎರಡು ಮೊರ್ಟಾರ್ ಬಾಂಬುಗಳು ಪತ್ತೆಯಾಗಿವೆ.
ಎರಡು ಬಾಂಬ್ ಗಳನ್ನು ಕಂಡ ಯುವಕನೋರ್ವ ಗ್ರಾಮದ ಸರಪಂಚರಿಗೆ ಮಾಹಿತಿ ನೀಡಿದ್ದ. ಬಳಿಕ ಸರಪಂಚರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸದರ್ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಕುಮಾರ್ ತಕ್ಷಣವೇ ಪಿಸಿಆರ್ ಅನ್ನು ನಿಯೋಜನೆ ಗೊಳಿಸಿ, ಸುತ್ತಮುತ್ತಲಿನ ಗ್ರಾಮಸ್ಥರನ್ನು ತೆರವುಗೊಳಿಸಿದರು. ನಂತರ, ಮಿಲಿಟರಿ ಕ್ಯಾಂಪ್ ನ ಮೇಜರ್ ಹಿಮಾಂಶು ನೇತೃತ್ವದ ಬಾಂಬ್ ನಿಷ್ಕ್ರೀಯ ತಂಡವು ಬಾಂಬ್‌ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿತು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮೇಜರ್ ಹಿಮಾಂಶು ಮಾತನಾಡಿ, ಎರಡು ಮೋರ್ಟಾರ್ ಬಾಂಬುಗಳು ಜೀವಂತವಾಗಿದ್ದು, ತುಂಬಾ ಹಳೆಯದಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
